ಶ್ರೀಮಂಗಲ, ಫೆ. 8: ಶ್ರೀಮಂಗಲ ನಾಡು ಕುಮುಟೂರು- ಬಾಡಗ ಗ್ರಾಮದ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನದಲ್ಲಿ ತಾ. 9 ರಿಂದ 14 ರವರೆಗೆ ನೀಲೇಶ್ವರ ಶ್ರೀ ದಾಮೋದರ ತಂತ್ರಿಯವರುಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.

ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಾಗೂ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ತಾ. 14 ರಂದು ಬೆಳಿಗ್ಗೆ 9 ಗಂಟೆಗೆ ಬ್ರಹ್ಮಕಲಶಾಭಿಷೇಕ ನಂತರ ದೇವರ ಮೂರ್ತಿಯನ್ನು ಹೊತ್ತು ನೃತ್ಯ ಪ್ರದಕ್ಷಿಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯರು ತಿಳಿಸಿದ್ದಾರೆ.