ಗುಡ್ಡೆಹೊಸೂರು, ಫೆ. 9: ಕೊಡಗು ಜಿಲ್ಲಾ ಕೊಡಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ 5ನೇ ವರ್ಷದ ಜಿಲ್ಲಾ ಸಮಾವೇಶ ತಾ. 13 ರಂದು ಸುಂಟಿಕೊಪ್ಪ ಶ್ರೀ ರಾಮಮಂದಿರ ಸಭಾಂಗಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9.30 ಗಂಟೆಗೆ ತಾಲಪೊಲಿ ಮತ್ತು ಚಂಡೆಮೇಳದೊಂದಿಗೆ ಶೋಭಾಯಾತ್ರೆಯು ಶ್ರೀ ಅಯ್ಯಪ್ಪ ದೇವಸ್ಥಾನದಿಂದ ಸಭಾಂಗಣದವರೆಗೆ ನಡೆಯಲಿದೆ. ಶೋಭಾಯಾತ್ರೆಯ ಉದ್ಘಾಟನೆಯನ್ನು ಡಾ. ಉದಯಕುಮಾರ್ ಮತ್ತು ಶಿಬುಸ್ವಾಮಿ ಕೇರಳ ಇವರು ನೆರವೇರಿಸುವರು. ಸಭಾ ಕಾರ್ಯಕ್ರಮ ಬೆಳಿಗ್ಗೆ 10.30 ಗಂಟೆಗೆ ಸಂಘದ ಜಿಲ್ಲಾಧ್ಯಕ್ಷ ರಂಗಸಮುದ್ರ ಗ್ರಾಮದ ವಿ.ಎನ್. ಕಿಶನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮತ್ತಿತರರು ಭಾಗವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಧಾರ್ಮಿಕ ಚಿಂತಕ ಲಕ್ಮೀಶ ಗಬಲಡ್ಕ ಅವರು “ಕಲಿಯುಗದಲ್ಲಿ ಭದ್ರಕಾಳಿಯ ಮಹತ್ವ” ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.