ಕೂಡಿಗೆ, ಫೆ. 9: ತಾಲೂಕು ಆರೋಗ್ಯಧಿಕಾರಿ ಕಚೇರಿ, ಕುಶಾಲನಗರ ಕೇಂದ್ರ ಸ್ಥಾನ ಹಾಗೂ ಕೂಡಿಗೆ ಕ್ರೀಡಾ ಶಾಲೆ ವತಿಯಿಂದ ಜಂತುಹುಳು ನಿರ್ಮೂಲನಾ ದಿನಾಚರಣೆ ಆಚರಿಸಲಾಯಿತು. ಉದ್ಘಾಟನೆಯನ್ನು ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ನೆರವೇರಿಸಿದರು.

ಅತಿಥಿಗಳಾಗಿ ಕೂಡಿಗೆ ಕ್ರೀಡಾಶಾಲೆಯ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವಿಚಂದ್ರ, ತಾಲೂಕು ಶಿಕ್ಷಣ ಆರೋಗ್ಯ ಅಧಿಕಾರಿ ಹೆಚ್.ಕೆ. ಶಾಂತಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಚಂದ್ರ, ದಮಯಂತಿ ಇದ್ದರು.

ಈ ಸಂದರ್ಭ ವಿದ್ಯಾರ್ಥಿಗಳಿಗೆ ಜಂತುಹುಳ ನಿರ್ಮೂಲನಾ ಮಾತ್ರೆಗಳನ್ನು ನೀಡಲಾಯಿತು. ಜಂತುಹುಳುವಿನ ತೊಂದರೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ತಾಲೂಕು ಶಿಕ್ಷಣ ಆರೋಗ್ಯ ಅಧಿಕಾರಿ ಶಾಂತಿ ನೀಡಿದರು.