ಶನಿವಾರಸಂತೆ, ಫೆ. 9: ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಸಾರ್ವಜನಿಕ ಸಮುದಾಯ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸುಮಾರು ರೂ. 2,500 ವೆಚ್ಚದಲ್ಲಿ ಯು.ಪಿ.ಎಸ್. ದೀಪ ಅಳವಡಿಸಲಾಯಿತು (ವಿದ್ಯುತ್ ನಿಲುಗಡೆಯಾದರೂ 2 ಗಂಟೆಗಳ ಕಾಲ ದೀಪ ಬೆಳಕು ಕೊಡುತ್ತದೆ).
ವಿದ್ಯುತ್ ದೀಪ ಬೆಳಗಿಸುವ ಮೂಲಕ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ಹೆಚ್.ವಿ. ದಿವಾಕರ್, ಶಂಭು, ಚಂದನ್, ಹೆಚ್.ಪಿ. ಮೋಹನ್, ಆಸ್ಪತ್ರೆಯ ಅಧಿಕಾರಿ ಎಂ.ಎಸ್. ಗಿರೀಶ್, ಸಿಬ್ಬಂದಿಗಳಾದ ನಾರಾಯಣ ಇತರರು ಉಪಸ್ಥಿತರಿದ್ದರು.