ಶನಿವಾರಸಂತೆ, ಫೆ. 9: ಶನಿವಾರಸಂತೆಯಲ್ಲಿ ಸಂಚರಿಸುವ ಕರ್ಕಶವಾಗಿ ಶಬ್ಧ ಮಾಡುವ ಬೈಕ್‍ಗಳನ್ನು ಹಾಗೂ ರಾತ್ರಿ ಹೊತ್ತು ಕಣ್ಣು ಕೊರೈಸುವಂತೆ ಬೈಕ್‍ಗಳಿಗೆ ಲೈಟಿಂಗ್ಸ್ ಅಳವಡಿಸಿಕೊಂಡು ಸಂಚರಿಸುವ ಬೈಕ್‍ಗಳನ್ನು ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ವಶಪಡಿಸಿಕೊಂಡು ಬೈಕ್‍ಗಳ ಸೈಲೆನ್ಸರ್ ಪೈಪ್ ಮತ್ತು ಎಲ್.ಇ.ಡಿ. ಲೈಟ್‍ಗಳನ್ನು ಬಿಚ್ಚಿಸಿ ಮುಟ್ಟುಗೋಲು ಹಾಕಿ ಕ್ರಮ ಜರುಗಿಸಿದರು.

ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಬೈಕ್‍ಗಳನ್ನು ವಶಪಡಿಸಿಕೊಂಡ ಪ್ರಕರಣ ದಾಖಲಿಸಲಾಯಿತು. ಈ ಬಗ್ಗೆ ಸವಾರರಿಗೆ ಸೂಕ್ತ ಎಚ್ಚರಿಕೆ ನೀಡಲಾಯಿತು. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳಾದ ಪ್ರದೀಪ್‍ಕುಮಾರ್, ಹರೀಶ್, ಬೋಪಣ್ಣ, ವಿವೇಕ್, ಶಿವಲಿಂಗ, ರಘು, ಶಫೀಕ್ ಪಾಲ್ಗೊಂಡಿದ್ದರು.