ಕುಶಾಲನಗರ, ಫೆ. 9: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ ವತಿಯಿಂದ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 8ನೇ ಇಂಟರ್ ಡೊಜೊ ಕರಾಟೆ ಮತ್ತು ಯೋಗ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಕುಶಾಲನಗರ ಸಮೀಪದ ಯಡವನಾಡು ಗ್ರಾಮದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಜಯಗಳಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಎಸ್.ಜೆ. ಧ್ರುವ ಬೆಳ್ಳಿಯಪ್ಪ ಕುಬುಡೋ ವಿಭಾಗದಲ್ಲಿ ದ್ವಿತೀಯ, ಕಥಾ ಹಾಗೂ ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ದೊಡ್ಡತ್ತೂರಿನ ಡಿ.ಎನ್. ಯೋಗೇಶ್ ಕುಮಿತೆ ವಿಭಾಗದಲ್ಲಿ ಪ್ರಥಮ, ಕಥಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಬುಡೋ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ.
ಜೆ.ಆರ್. ಹೇಮಂತ್ ಕುಬುಡೊ ವಿಭಾಗದಲ್ಲಿ ಪ್ರಥಮ, ಪಾಣತ್ತಲೆ ಯತಿನ್ ಕಥಾ ವಿಭಾಗದಲ್ಲಿ ಪ್ರಥಮ, ಕುಬುಡೋ ವಿಭಾಗದಲ್ಲಿ ಪ್ರಥಮ, ಯೋಗ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಯಡವನಾಡಿನ ಜೆ.ಎನ್. ಚಂದ್ರು ಇವರಿಗೆ ತರಬೇತಿ ನೀಡಿದ್ದಾರೆ.