ಶನಿವಾರಸಂತೆ, ಫೆ. 9: ಪಟ್ಟಣದ 1ನೇ ವಿಭಾಗದಲ್ಲಿರುವ ಅಂಗಡಿಗೆ ಬಂದ ಕಳ್ಳರಿಬ್ಬರು ಕೆಲಸಗಾರನÀನ್ನು ವಂಚಿಸಿ ಟೇಬಲ್ ಡ್ರಾಯರ್‍ನಲ್ಲಿದ್ದ ರೂ. 1,58,460 ಅನ್ನು ಕಳವು ಮಾಡಿದ ಘಟನೆ ಶುಕ್ರವಾರ ನಡೆದಿದೆ. ಗುಡುಗಳಲೆ ಗ್ರಾಮದ ಜಿ.ಎಂ. ಆನಂದಯ್ಯ ಅವರ ಅರುಲ್ ಟ್ರೇಡರ್ಸ್ ಅಂಗಡಿಯಲ್ಲಿ ಘಟನೆ ನಡೆದಿದೆ.
ಮಧ್ಯಾಹ್ನ ಕಾವಲುಗಾರನಿಗೆ ಅಂಗಡಿ ನೋಡಿಕೊಳ್ಳುವಂತೆ ತಿಳಿಸಿ ಊಟಕ್ಕೆ ಹೋಗಿದ್ದ ಸಮಯದಲ್ಲಿ ಅಂಗಡಿಗೆ ಬಂದ ಇಬ್ಬರು ಕಳ್ಳರು ಮಾಲೀಕರ ಬಗ್ಗೆ ವಿಚಾರಿಸಿ ಕಾವಲುಗಾರ ಮಹೇಶ್ ಬಳಿ ಬೇಕರಿಯಿಂದ ಪಪ್ಸ್ ತರುವಂತೆ ಕಳುಹಿಸಿ, ಟೇಬಲ್ ಡ್ರಾಯರ್ ಲಾಕ್ ತೆಗೆದು ಹಣ ಕಳವು ಮಾಡಿದ್ದಾರೆ. ಆನಂದಯ್ಯ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.