ಮಡಿಕೇರಿ, ಫೆ. 9: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮುತ್ತ್‍ನಾಡ್ ಅಭಿಮಾನಿ ಒಕ್ಕೂಟದ ಸಹಯೋಗದಲ್ಲಿ ಕಾಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡವ ಜಾನಪದ ನಮ್ಮೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉಮ್ಮತ್ತಾಟ್, ಕೊಡವ ತಿಂಗ ಪೆದ, ಕೋರ್ ಚೌಕ ಕಟ್ಟುವೊ, ಬಾಳೋಪಾಟ್, ತಾಲಿಪಾಟ್, ಪರಿಯಕಳಿ, ಸಮ್ಮಂದ ಅಡ್‍ಕುವೊ, ಪುತ್ತರಿ ಕೋಲಾಟ್, ಬೊಳಕಾಟ್, ಕತ್ತಿಯಾಟ್, ವಾಲಗತ್ತಾಟ್, ಕೊಡವ ಪಾಟ್, ಕೊಡವ ಗಾದೆ ಹೀಗೆ ವಿವಿಧ ಸ್ಪರ್ಧೆಗಳು ನಡೆದವು.