ಮೂರ್ನಾಡು: ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ 70ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಅವರೆಮಾದಂಡ ಮೊಣ್ಣಪ್ಪ ದೇಶದ ಬಗ್ಗೆ ಯುವಕ-ಯುವತಿಯರಿಗೆ ಚಿಂತನೆ ಇದ್ದರೆ ದೇಶದ ಅಭಿವೃದ್ಧಿಯಾಗುವದರೊಂದಿಗೆ ಯುವ ಪೀಳಿಗೆ ಕೂಡ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದರು.

ಸಮಾರಂಭಕ್ಕೆ ಮೊದಲು ಅವರೆಮಾದಂಡ ಮೊಣ್ಣಪ್ಪ ಧ್ವಜಾರೋಹಣಗೈದು ವಿದ್ಯಾಸಂಸ್ಥೆಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು. ಹುತಾತ್ಮರಾದ ಯೋಧರಿಗೆ ಗಣ್ಯರು ಪುಷ್ಪಾರ್ಚನೆಗೈದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾ ಮೊಣ್ಣಪ್ಪ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕರಾದ ನಂದೇಟಿರ ರಾಜಾ ಮಾದಪ್ಪ, ತೇಲಪಂಡ ಶೈಲಾ, ಪಳಂಗಂಡ ವಿಠಲ ಪೂವಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಉಪಸ್ಥಿತರಿದ್ದರು.ಹುದಿಕೇರಿ: ಹುದಿಕೇರಿಯ ಜನತಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಕಾರದ ಯೋಜನೆಯಡಿ ಸೈಕಲ್ ವಿತರಣೆ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧÀ್ಯಕ್ಷ ಚಂಗುಲಂಡ ಸೂರಜ್ ವಹಿಸಿದ್ದರು. ಅತಿಥಿಯಾಗಿ ಆಗಮಿಸಿದ್ದ ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಕಳ್ಳೇಂಗಡ ಸುಧಾ ರಮೇಶ್ ಸೈಕಲ್ ವಿತರಿಸಿದರು. ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ವಿದ್ಯಾರ್ಥಿನಿ ಪ್ರಜ್ಞಾಶ್ರೀ ಮಾತನಾಡಿದರು. ವೇದಿಕೆಯಲ್ಲಿ ಸಹ ಶಿಕ್ಷಕರಾದ ಗಿರೀಶ್, ಮಲ್ಲಿಕಾರ್ಜುನ್, ಸುಬ್ರಮಣಿ, ಮೋಹನ್, ಚೋಂದಮ್ಮ, ಸರಿತ ಉಪಸ್ಥಿತರಿದ್ದರು. 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು. ರಮ್ಯ ಪ್ರಾರ್ಥಿಸಿದರೆ, ಮುಖ್ಯೋಪಾಧ್ಯಾಯರಾದ ಸಿ.ಕೆ. ಮೋಹನ್ ಕುಮಾರಿ ಸ್ವಾಗತಿಸಿದರು. ಸಹ ಶಿಕ್ಷಕ ಭಾಸ್ಕರ್ ವಂದಿಸಿದರು.

ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ತಿಲಕ ವಹಿಸಿದ್ದರು.

ಹಿಂದಿ ಶಿಕ್ಷಕ ಎಂ.ಈ. ಮನೋಜ್ ಧ್ವಜಾರೋಹಣ ನೆರವೇರಿಸಿ, ದಿನದ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿಜ್ಞಾನ ಶಿಕ್ಷಕ ಸಿ. ಪ್ರಸನ್ನ ನಿರೂಪಿಸಿದರೆ, ಕನ್ನಡ ಶಿಕ್ಷಕಿ ಯು, ಸುನಂದ ವಂದಿಸಿದರು.