ಕೂಡಿಗೆ, ಫೆ. 9: ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ಈ ವ್ಯಾಪ್ತಿಯ ರೈತರ ಹಸುಗಳಿಗೆ ಹಾಸನ ಹಾಲು ಒಕ್ಕೂಟದ ಪಶು ವೈದ್ಯಕೀಯ ತಂಡದವರಿಂದ ಆರೋಗ್ಯಕರ ಚಿಕಿತ್ಸೆ ನೀಡಲಾಯಿತು.

ಚಿಕಿತ್ಸೆ ಬಗ್ಗೆ ಪಶು ವೈದ್ಯಾಧಿಕಾರಿ ಡಾ. ಪಾಲಾಕ್ಷ ಮಾಹಿತಿ ನೀಡಿದರು. ಈ ಸಂದರ್ಭ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್, ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್, ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರು, ರೈತರು ಇದ್ದರು.