ಗೋಣಿಕೊಪ್ಪಲು, ಫೆ. 9: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಪೊಲೀಸರು ವಾಹನಗಳಿಗೆ ಸನ್‍ಗ್ಲಾಸ್ ಅಳವಡಿಸಿದ್ದನ್ನು ತೆಗೆದು ಹಾಕುವ ಮೂಲಕ ವಾಹನ ಚಾಲಕರಿಗೆ ,ಮಾಲೀಕರಿಗೆ ದಂಡ ವಿಧಿಸಿದರು. ಗೋಣಿಕೊಪ್ಪ ಠಾಣಾಧಿಕಾರಿ ಶ್ರೀಧರ್ ನಗರದಲ್ಲಿ ಸಂಚರಿಸುವ ವಾಹನಗಳನ್ನು ಪರಿಶೀಲನೆ ನಡೆಸಿದರು. ಕೆಲವು ವಾಹನಗಳಲ್ಲಿ ಕಡು ಕಪ್ಪು ಬಣ್ಣದ ಸನ್‍ಗ್ಲಾಸ್ ಅಳವಡಿಸಿದ್ದು ತಪಾಸಣೆ ವೇಳೆ ಕಂಡು ಬಂತು. ನೂರಾರು ವಾಹನಗಳನ್ನು ತಪಾಸಣೆ ನಡೆಸಲಾಗಿ ದಂಡ ವಿಧಿಸಲಾಯಿತು. ನಗರದಲ್ಲಿ ಕೆಲವು ವಾಹನಗಳು ಕಡು ಕಪ್ಪು ಬಣ್ಣದ ಸನ್‍ಗ್ಲಾಸ್ ಅಳವಡಿಸಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ದೊರೆತ್ತಿದ್ದು, ಆದಷ್ಟು ಬೇಗನೇ ಇಂತಹ ವಾಹನಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವದೆಂದು ಸಬ್‍ಇನ್ಸ್‍ಪೆಕ್ಟರ್ ಶ್ರೀಧರ್ ಮಾಹಿತಿ ನೀಡಿದರು.