ಪೊನ್ನಂಪೇಟೆ, ಫೆ. 9: ಅಖಿಲ ಭಾರತ ಅಂತರ್ ಡೋಜೋ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಇಬ್ಬರು ವಿದ್ಯಾರ್ಥಿನಿ ಯರು ಚಿನ್ನ ಸೇರಿದಂತೆ ತಲಾ ಎರಡು ಪದಕ ಗಳನ್ನು ತಮ್ಮದಾಗಿಸಿ ಕೊಂಡು ಸಾಧನೆ ಗೈದಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಚಾಂಪಿಯನ್‍ಶಿಪ್‍ನಲ್ಲಿ 22ರಿಂದ 25 ಕೆ.ಜಿ.ಯವರೆಗಿನ ಸ್ಫರ್ಧೆಯಲ್ಲಿ ದುದ್ದಿಯಂಡ ಎಚ್. ಮುರ್ಶಿದ 1 ಚಿನ್ನ ಮತ್ತು 1 ಬೆಳ್ಳಿ ಪದಕ ಗಳಿಸಿದರೆ, 32ರಿಂದ 35 ಕೆ.ಜಿ.ಯವರೆಗಿನ ಸ್ಫರ್ಧೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಆಲೀರ ಯು. ನಾಫಿಯಾ 1 ಚಿನ್ನ ಮತ್ತು 1 ಕಂಚಿನ ಪದಕ ಪಡೆಯುವದರ ಮೂಲಕ ಸ್ಥಾನ ಪಡೆದುಕೊಂಡಿದ್ದಾರೆ.

ದುದ್ದಿಯಂಡ ಎಸ್. ಹಂಸ ಮತ್ತು ಮುಮ್ತಾಜ್ ದಂಪತಿಗಳ ಪುತ್ರಿಯಾಗಿರುವ ಮುರ್ಶಿದ ಮತ್ತು ಆಲೀರ ಎಂ. ಉಸ್ಮಾನ್ (ಅಲವಿ) ಮತ್ತು ರುಮ್ತಾಜ್ ದಂಪತಿಗಳ ಪುತ್ರಿಯಾಗಿರುವ ನಾಫಿಯಾ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.