*ಗೋಣಿಕೊಪ್ಪ, ಫೆ. 11: ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಅಕ್ಕನನ್ನು ತಮ್ಮನೇ ಕತ್ತಿಯಿಂದ ಕಡಿದು ಹತ್ಯೆ ಮಾಡಿದ ಘಟನೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪಾರ್ವತಿ(35) ಮೃತಪಟ್ಟಿದ್ದು, ಆಕೆಯ ತಮ್ಮ ಎರವರ ಪುಟ್ಟ (34) ಹತ್ಯೆ ಮಾಡಿದ ವ್ಯಕ್ತಿಯಾಗಿದ್ದಾನೆ. ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಕರಡಿಕೊಪ್ಪ, ನಾಯಿಮಣ್ಣು ಕಾಲೋನಿಗೆ ಹೋಗುವ ರಸ್ತೆ ಸಮೀಪದ ಲೈನ್ ಮನೆಯಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ. ತೋಟ ಕಾರ್ಮಿಕರಾಗಿದ್ದ ಅಕ್ಕ-ತಮ್ಮ ಇಬ್ಬರು ಒಂದೇ ಮನೆಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ಭಾನುವಾರ ಕುಡಿದ ಮತ್ತಿನಲ್ಲಿದ್ದಪುಟ್ಟ ಹಾಗೂ ಪಾರ್ವತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಪುಟ್ಟ ತನ್ನ ಅಕ್ಕ ಪಾರ್ವತಿಯ ತಲೆ, ಕೈ, ಕಾಲುಗಳಿಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. (ಮೊದಲ ಪುಟದಿಂದ) ತೀವ್ರ ರಕ್ತ ಸ್ರಾವದಿಂದ ಪಾರ್ವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸೋಮವಾರ ಬೆಳಗಿನ ಜಾವ ಸಮೀಪದ ನಿವಾಸಿಗಳು ಬಂದು ನೋಡಿದಾಗ ಪಾರ್ವತಿ ಕೊಲೆಯಾಗಿರುವದು ಗೋಚರಿಸಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ದಿವಾಕರ್ ಪೊನ್ನಂಪೇಟೆ ಪೋಲೀಸ್ ಠಾಣೆ ಅಧಿಕಾರಿ ಮಹೇಶ್ ಭೇಟಿ ನೀಡಿ ಕ್ರಮಕೈಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

-ಎನ್.ಎನ್.ದಿನೇಶ್