ವೀರಾಜಪೇಟೆ, ಫೆ.11: ಮನೆಯಲ್ಲಿ ಅಕ್ರಮವಾಗಿ ಮದ್ಯ ಶೇಖರಿಸಿಟ್ಟಿದ್ದನ್ನು ಪತ್ತೆ ಹಚ್ಚಿದ ವೀರಾಜಪೇಟೆ ಗ್ರಾಮಾಂತರ ಪೊಲೀಸರು, ಕಾಕೋಟುಪರಂಬು ನಿವಾಸಿ ಎಂ.ಎಸ್. ಕರುಂಬಯ್ಯ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಮುಖ್ಯ ಪೇದೆ ಕಿರಣ್ ಕುಮಾರ್ ,ಅಪರಾದ ಪತ್ತೆ ವಿಭಾಗದ ಸಿಬ್ಬಂದಿ ಚಂದ್ರಶೇಖರ್ ಎಂ. ಚಾಲಕ ಗೊಪಿನಾಥ್ ಭಾಗವಹಿಸಿದ್ದರು.