ನನ್ನ ಗಂಡ ಎಂ. ರಾಜ (38) ಅವರಿಗೆ ಹೃದಯ ಬೇನೆ ಕಾಣಿಸಿಕೊಂಡಿದ್ದು, ಕಳೆದ ಒಂದು ತಿಂಗಳ ಕಾಲ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂದರ್ಭ ಹೃದಯದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿರುತ್ತಾರೆ. ನಮ್ಮದು ಮೂರು ಮಕ್ಕಳನ್ನೊಳಗೊಂಡ ಬಡ ಕುಟುಂಬವಾಗಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದೆವು. ಇದೀಗ ನನ್ನ ಗಂಡನಿಗೆ ದುಡಿಯಲೂ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಗಂಡನ ಚಿಕಿತ್ಸಾ ವೆಚ್ಚಕ್ಕೆ ದೊಡ್ಡ ಮೊತ್ತ ಬೇಕಾಗಿರುವದರಿಂದ ನಾನು ವಿಧಿ ಇಲ್ಲದೆ ಸಾರ್ವಜನಿಕರ ಸಹಾಯ ಕೋರುತ್ತಿದ್ದೇನೆ. ಕೊಡುಗೈ ದಾನಿಗಳು ತಮ್ಮಿಂದಾಗುವ ಮೊತ್ತವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಟ್ಟು ನನ್ನ ಗಂಡನ ಜೀವ ಉಳಿಸಲು ಸಹಕಾರ ನೀಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ನೆರವು ನೀಡಬೇಕಾದ ವಿಳಾಸ: ರಾಜ ಎಂ. ಂ/ಅ ಓo. 4812500101611401, IಈSಅ ಅoಜe : ಏಂಖಃ0000481, ಏಚಿಡಿಟಿಚಿಣಚಿಞಚಿ ಃಚಿಟಿಞ- ಒಚಿಜiಞeಡಿi.

ಸಹೃದಯಿ ದಾನಿಗಳ ನೆರವು ನಿರೀಕ್ಷಿಸುವ,

ಜಯಲಕ್ಷ್ಮಿ, ಮಲ್ಲಿಕಾರ್ಜುನ ನಗರ, ಮಡಿಕೇರಿ.