ಸುಂಟಿಕೊಪ್ಪ, ಫೆ.11: ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಘಟಿಸಿದ ಜಲಪ್ರಳಯ ಅತಿವೃಷ್ಟಿಯಿಂದ ಮನೆ, ಮಠ, ತೋಟ ಕಳೆದುಕೊಂಡು ಸುಂಟಿಕೊಪ್ಪಕ್ಕೆ ಬರಿಗೈಯಲ್ಲಿ ಬಂದಿದ್ದ ನಿರಾಶ್ರಿತರಿಗೆ ಸಕಾಲದಲ್ಲಿ ಸ್ಪಂದಿಸಿ ಸಹಾಯಹಸ್ತ ನೆರವು ನೀಡಿ ಯೋಗ ಕ್ಷೇಮ ನೋಡಿಕೊಂಡ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಗದ್ದೆಹಳ್ಳದ ಪಿ.ಆರ್.ಸುನಿಲ್ ಕುಮಾರ್, ಉಸ್ತಾದ್ ಹಮೀದ್‍ಮಮೌಲವಿ, ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ಎಡ್ವರ್ಡ್ ವಿಲಿಯಿಂ ಸಾಲ್ಡಾನಾ ಹಾಗೂ ಟಿಬೆಟಿಯನ್ ಲಾಮ ಅವರ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ದಿ ಇಂಡಿಯಾ ಅರ್ಮೋನಿ ಫೌಂಡೇಷನ್ ಸಂಸ್ಥೆ ವತಿಯಿಂದ ಶಿಸ್ತು ಇಂಡಿಯಾ ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಲಾಯಿತು.