*ಸಿದ್ದಾಪುರ, ಫೆ. 11: ಟಾಟಾ ಸಂಸ್ಥೆಯ ಕಾನನಕಾಡು ವಿಭಾಗದ ಕಾಫಿ ತೋಟದಲ್ಲಿ ಕಾಫಿ ಸಂಸ್ಕರಿಸಿದ ಪಲ್ಪಿಂಗ್ ನೀರು ತೋಡಿಗೆ ಸೇರ್ಪಡೆಗೊಂಡಿರುವದು ಸಂಸ್ಥೆಯ ಸಿಬ್ಬಂದಿಗಳ ಮತ್ತು ಕಾರ್ಮಿಕರ ಬೇಜವಬ್ದಾರಿಯಿಂದ ಅಲ್ಲ ಎಂಬ ಅಂಶ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗ್ರಾಮಾಡಳಿತ ಪರಿಶೀಲನೆ ವೇಳೆ ಕಂಡು ಬಂದಿದೆ.
ಟಾಟಾ ಸಂಸ್ಥೆಯು ಒಂದು ಹನಿ ಪಲ್ಪಿಂಗ್ ಸೇರಿದಂತೆ ಇತರ ನೀರು ಹೊರ ಹೋಗದಂತೆ ಎಚ್ಚರ ವಹಿಸಿದ್ದರೂ ಇಲಿ, ಹೆಗ್ಗಣಗಳು ಮತ್ತು ಏಡಿಗಳ ಕಾಟದಿಂದ ಕೊಂಚ ಮಟ್ಟಿಗಿನ ಸೋರಿಕೆ ಕಂಡು ಬಂದಿತ್ತು.
ಪರಿಸರ ಮತ್ತು ಸ್ಥಳೀಯವಾಗಿ ಹರಿಯುವ ತೋಡು ಮತ್ತು ಕಾಲುವೆಗಳ ಸಂರಕ್ಷಣೆಗೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿಗಳನ್ನು ಸಂಸ್ಥೆಯು ವ್ಯಯಿಸುತ್ತಿದ್ದು, ಮಾಲಿನ್ಯ ನಿಯಂತ್ರಣ ಅಧಿಕಾರಿ ಟಾಟಾ ಸಂಸ್ಥೆಯ ಕಾರ್ಯವೈಖರಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಧಾರಣವಾಗಿ ಪೈಪ್ ಅಳವಡಿಕೆಯಲ್ಲಿ ಉಂಟಾದ ಸಡಿಲತೆ ಮತ್ತು ಹೆಗ್ಗಣಗಳ ವಿಪರೀತ ಕಾಟದಿಂದ ಪೈಪ್ ಲೈನ್‍ಗಳಲ್ಲಿ ಸೋರಿಕೆ ಕಂಡು ಬಂದಿದ್ದು, ಕೊಂಚ ಮಟ್ಟಿಗಿನ ಪಲ್ಪಿಂಗ್ ನೀರು ಸೋರಿಕೆಯಾಗುತ್ತಿತ್ತು. ಸೋರಿಕೆ ಬಗ್ಗೆ ಗ್ರಾಮಾಡಳಿತದ ಗಮನಕ್ಕೆ ಬಂದ ಹಿನೆÀ್ನಲೆಯಲ್ಲಿ ತೋಡಿಗೆ ಪಲ್ಪಿಂಗ್ ನೀರು ಸೇರ್ಪಡೆಯಾಗುವ ಅಪಾಯವಿದೆ ಎಂದು ಎಚ್ಚರಿಸಿ ನೋಟೀಸ್ ಜಾರಿ ಮಾಡಲಾಗಿತ್ತು.
ಕಾಫಿ ಪಲ್ಪಿಂಗ್ ನೀರು ಸಂಸ್ಕರಿಸಲು ಸಂಸ್ಥೆಯು ಕಾಫಿ ತೋಟದ ಒಳಗೆ ನಾಲ್ಕು ಬೃಹತ್ ಕೆರೆಗಳನ್ನು ತೋಡಿ ನೀರನ್ನು ಶೇಖರಿಸಿ ಶುದ್ಧೀಕರಣ ಮಾಡುತ್ತಿರುವದನ್ನು ಮಾಲಿನ್ಯ ನಿಯಂತ್ರಣ ಅಧಿಕಾರಿ ಆಭಿದ್ಹಾ, ಗ್ರಾಮಾಭಿವೃದ್ಧಿ ಅಧಿಕಾರಿ ಅನಿಲ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ವೀಕ್ಷಿಸಿದರು.