ಕುಶಾಲನಗರ, ಫೆ 11: ಎರಡನೇ ಮಹಾಯುದ್ಧದ ನಂತರದಲ್ಲಿ ಯುದ್ಧ ಮತ್ತು ಸಂಘರ್ಷಗಳಿಂದ ತೊಡ ಕುಂಟಾಗಿದ್ದ ಯುರೋಪಿಯನ್ ಯೂನಿಯನ್ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪ್ರಮುಖ ಸಂಘಟನೆಯಾಗಿ ಮೂಡಿಬಂದಿದೆ ಎಂದು ಯೂರೋಪಿಯನ್ ಸಂಸತ್ತಿನ ಮಾಜಿ ಸದಸ್ಯ ಮೈಕಲ್ ಹಿಂಡ್ಲೆ ಹೇಳಿದರು.
ಹೋಬಳಿಯ ಚಿಕ್ಕ ಅಳುವಾರದಲ್ಲಿರುವ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ ಮತ್ತು ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ, ಇವರುಗಳ ಸಹಯೋಗ ದೊಂದಿಗೆ ನಡೆದ 'ಯೂರೋಪಿ ಯನ್ ಯೂನಿಯನ್‍ನ ಪ್ರಸ್ತುತ ಬೆಳವಣಿಗೆ' ಕುರಿತಾದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಬ್ರಿಟನ್ ಯೂರೋಪಿಯನ್ ಯೂನಿಯನ್ ನಿಂದ ಹೊರಬರುವ ನಿರ್ಣಯವನ್ನು ರಾಜಕೀಯ ಪಕ್ಷಗಳು ಸ್ವಾಗತಿಸಿವೆ. ಅದರೆ ಬ್ರೇಕ್ಷಿಟ್ ನಂತರದಲ್ಲಿ ಯೂರೋಪಿಯನ್ ಯೂನಿಯನ್ ನಲ್ಲಿ ಬ್ರಿಟನ್‍ನ ಸ್ಥಾನಮಾನವನ್ನು ನಿರ್ಧರಿಸುವ ಬಗ್ಗೆ ಭಿನ್ನಾಭಿಪ್ರಾಯ ಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ದರು. ಭಾರತ ಮತ್ತು ಯೂರೋಪಿ ಯನ್ ಯೂನಿಯನ್ ನಡುವೆ ಅರ್ಥಿಕ ಸಂಬಂಧಗಳು, ಬ್ರೇಕ್ಷಿಟ್ ಹಾಗೂ ನಿರಾಶ್ರಿತರ ಸಮಸ್ಯೆಗಳ ಕುರಿತಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಭಾಗದ ಅದ್ಯಕ್ಷ ಪ್ರೊ. ಜಯರಾಜ್ ಅಮೀನ್ ಅವರು, ಮಂಗಳೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಜೀನ್ ಮ್ಯಾನೆಟ್‍ರ ಮತ್ತು ಎರಾಸಮಸ್ ಮೂಂಡಸ್ ಫೆಲೋಷಿಪ್‍ಗಳ ಮೂಲಕ ನುರಿತ ತಜ್ಞರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದ್ದು, ಇದರ ಸದುಪಯೋಗ ವನ್ನು ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ ವಿದ್ಯಾರ್ಥಿಗಳು, ಸಂಶೋಧಕರು, ಮತ್ತು ಉಪನ್ಯಾಸಕರು ಗಳು ಪಡೆದುಕೊಳ್ಳ ಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜ್ಞಾನಕಾವೇರಿ ಕೇಂದ್ರದ ಪ್ರಭಾರ ನಿರ್ದೇಶಕಿ ಪ್ರೊ. ಮಂಜುಳಾ ಶಾಂತರಾಮ್, ಪ್ರಸ್ತುತದಲ್ಲಿ ಯೂರೋಪಿನ್ ಯೂನಿಯನ್ ಬೆಳವಣಿಗೆಯು ಇಡೀ ಜಾಗತಿಕ ಮಟ್ಟದಲ್ಲಿ ಪ್ರಮುಖ ಚರ್ಚಿತವಾದ ವಿಷಯವಾಗಿದೆ. ಅದರಲ್ಲೂ ಯೂರೋಪಿನ್ ಯೂನಿಯನ್‍ನಿಂದ ಹೊರಬರುವ ಯು.ಕೆ. ನಿರ್ಣಯ ಅಲ್ಲಿನ ಜನ ಸಾಮಾನ್ಯರಲ್ಲಿ ಗೊಂದಲವನ್ನುಂಟುಮಾಡಿದೆ ಎಂದು ಅಭಿಪ್ರಾಯಪಟ್ಟರು
ಇದೇ ಸಂದರ್ಭದಲ್ಲಿ ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಸಿ.ಪುಷ್ಪಲತಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಕೆ.ಕೆ.ಧರ್ಮಪ್ಪ, ಎಸ್ಸಿ/ಎಸ್ಟಿ ಸೆಲ್‍ನ ಸಂಯೋಜಕ ಡಾ.ರಾಜಕುಮಾರ್ ಮೇಟಿ, ಸಹಾಯಕ ಪ್ರಾಧ್ಯಾಪಕ ಡಾ.ಐ.ಕೆ.ಮಂಜುಳಾ, ಮಂಗಳೂರು ವಿಶ್ವವಿದ್ಯಾನಿಲಯ ಸಂಶೋಧನಾ ವಿದ್ಯಾರ್ಥಿ ಎನ್.ಕೆ.ಸುದರ್ಶನ್ ಕುಮಾರ್, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರುಗಳಾದ ಬಿ.ಎಸ್. ಮಮತಾ, ವೆಂಕಟೇಶ್ ಮತ್ತು ಸಿ.ಎಸ್.ತಾರಾ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಬೋಧಕೇತರ ವೃಂದ, ತಾಂತ್ರಿಕ ವೃಂದ, ಸಂಶೋಧನಾ ವಿದ್ಯಾರ್ಥಿ ಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.