ಮಡಿಕೇರಿ, ಫೆ.10 : ರೈಲ್ವೆ, ಚತುಷ್ಪಥ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ ಉಂಟು ಮಾಡುವ ಮೂಲಕ ಪರಿಸರವಾದಿಗಳು ಕೊಡಗಿನ ಅಭಿವೃದ್ಧಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಸೇವ್ ಕೊಡಗು ಸಂಘಟನೆ ತಾ.11 ರಂದು ಪ್ರತಿಭಟನೆಗೆ ಮುಂದಾಗಿದೆ. ಆದರೆ ಬಿಜೆಪಿ ಹೆಣೆದ ಬಲೆಯಲ್ಲಿ ಈ ಸಂಘಟನೆ ಸಿಲುಕಿಕೊಂಡಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ಇ.ರ. ದುರ್ಗಾಪ್ರಸಾದ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಿಲ್ಲೆ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ಪ್ರಮುಖ ಕಾರಣವಾಗಿದ್ದು, ಈ ಸತ್ಯವನ್ನು ಮುಚ್ಚಿಡಲು ಪರಿಸರವಾದಿಗಳ ವಿರುದ್ಧ ಗೂಬೆ ಕೂರಿಸಲಾಗುತ್ತಿದೆ ಎಂದು ಆರೋಪಿಸಿದರು. ಸೇವ್ ಕೊಡಗು ಸಂಘಟನೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಹೋರಾಟವನ್ನು ರೂಪಿಸಿದಲ್ಲಿ ಪಕ್ಷ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಹೊರತು, ತಾ.11 ರ ಪ್ರತಿಭಟನೆಗೆ ಬೆಂಬಲ ನೀಡುವದಿಲ್ಲವೆಂದು ಸ್ಪಷ್ಟಪಡಿಸಿದರು.

ಪರಿಸರವಾದಿಗಳ ವಿರುದ್ಧ ಹೋರಾಟ ನಡೆಸುವದಕ್ಕೆ ಸೇವ್ ಕೊಡಗು ಸಂಘಟನೆ ಕೆಲವು ಕಾರಣಗಳನ್ನು ನೀಡಿದೆ. ಕೊಡಗಿನ ಬಾಣೆ ಜಮೀನನ್ನು ಅರಣ್ಯ ಪ್ರದೇಶವೆಂದು ಘೋಷಿಸಿ ಸುತ್ತೋಲೆ ಹೊರಡಿಸುವಲ್ಲಿ ಯಶಸ್ವಿಯಾಗಿರುವದು, ಪಶ್ಚಿಮ ಘಟ್ಟ ಸಾಲನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿರುವದು, ಡಾ.ಕಸ್ತೂರಿ ರಂಗನ್ ವರದಿಯ ಅನುಷ್ಟಾನಕ್ಕೆ ನಿರಂತರ ಪ್ರಯತ್ನ ಮುಂದುವರೆಸಿರುವದು ಎಂದು ತಿಳಿಸಲಾಗಿದೆ. ಆದರೆ ಈ ರೀತಿಯ ಕಾರಣಗಳು ಅರ್ಥಹೀನವಾಗಿದ್ದು, ಪರಿಸರ ಮತ್ತು ಬಾಣೆ ಜಮೀನಿನ ಗೊಂದಲಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ದ್ವಂದ್ವ ನಿಲುವುಗಳೇ ಕಾರಣ ಹೊರತು ಪರಿಸರವಾದಿಗಳು ಅಲ್ಲವೆಂದು ದುರ್ಗಾಪ್ರಸಾದ್ ಟೀಕಿಸಿದರು.

ಬಾಣೆÉ ಸಮಸ್ಯೆಗೆ ಬಿಜೆಪಿ ಕಾರಣ- 1964 ರ ಕಂದಾಯ ಕಾನೂನು ಕೊಡಗಿನಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿದ್ದಲ್ಲಿ ಕೊಡಗಿನ ಜಮ್ಮಾ ಬಾಣೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ, ಅಂದಿನ ಅಧಿಕಾರಿಗಳು ಇದನ್ನು ಅರಿತು ಕೊಳ್ಳದಿದ್ದುದರಿಂದ ಸಮಸ್ಯೆ ಮುಂದುವರಿಯಿತಲ್ಲದೆ, ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಅವರು ವಿಷಯವನ್ನು ರಾಜ್ಯ ಉಚ್ಚ ನ್ಯಾಯಾಲಯದ ಮುಂದಕ್ಕೆ ಕೊಂಡೊಯ್ದು 13 ವರ್ಷಗಳ ಸತತ ಪ್ರಯತ್ನದ ಫಲವಾಗಿ ಬಾಣೆ ಹಿಡುವಳಿದಾರರ ಪರವಾದ ತೀರ್ಪನ್ನು ತರಲು ಯಶಸ್ವಿಯಾದರು.

ಈ ತೀರ್ಪಿನ ಆಧಾರದಲ್ಲಿ 2000ನೇ ಇಸವಿಯಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶ ಜಾರಿ ಮಾಡಿದ್ದರೂ ಸಮಸ್ಯೆ ಇಲ್ಲಿಯವರೆಗೆ ಎಳೆÉದುಕೊಂಡು ಬರುತ್ತಿರಲಿಲ್ಲ. ಇದೇ ಹಂತದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಧಿಕಾರಿಯೊಬ್ಬಾತ ‘ಕೊಡಗಿನ ಬಾಣೆ ಜಾಗ ಅರಣ್ಯ ಪ್ರದೇಶ’ವೆಂದು ಹೊರಡಿಸಿದ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲು ಅಂದಿನ ಕಂದಾಯ ಸಚಿವ , ಬಿಜೆಪಿಯ ಜಗದೀಶ್ ಶೆಟ್ಟರ್ ಅವರಿಗೆ ಸಾಧ್ಯವಾಗಲಿಲ್ಲವೆಂದು ಲೆÉೀವಡಿ ಮಾಡಿ, ಬಳಿಕ ಕೆ.ಜಿ. ಬೋಪಯ್ಯ ಅವರು ಕಂದಾಯ ಕಾಯ್ದೆಯ ತಿದ್ದುಪಡಿ ತರುವ ಮೂಲಕ ರಾಷ್ಟ್ರಪÀತಿಗಳ ಅಂಕಿತ ಬಿದ್ದರೂ ಸಮಸ್ಯೆ ಬರೆಹರಿಯಲಿಲ್ಲ. ಯಡಿಯೂರಪ್ಪ ಅವರು ತಾನು ಅಧಿಕಾರಿಕ್ಕೆ ಬಂದ ವಾರದಲ್ಲಿ ಸಮಸ್ಯೆ ಬಗೆಹರಿಸುವದಾಗಿ ತಿಳಿಸಿದರೂ ಅದೂ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಈ ಎಲ್ಲಾ ವಿಚಾರಗಳಿಗೆ ಪರಿಸರವಾದಿಗಳು ಕಾರಣವೆಂದು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಬಿಜೆಪಿ ಪ್ರಮುಖರು ಮಾಡುತ್ತಿರುವದಾಗಿ ಟೀಕಿಸಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿತ್ತಾದರೆ, ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರಗಳಿವೆ. ಕಾಂಗ್ರೆಸ್‍ನ ದೇಶಪಾಂಡೆಯವರು ಕಂದಾಯ ಸಚಿವರಾಗಿದ್ದಾರೆ. ಹೀಗಿದ್ದೂ ಬಾಣೆ ಒಡೆತನದ ಪ್ರಶ್ನೆಯನ್ನು ಅವರಿಗೆ ಬಗೆಹರಿಸಲು ಸಾಧ್ಯವಾಗಿಲ್ಲವೆಂದು ಟೀಕೆ ಮಾಡಿದ ಡಾ. ದುರ್ಗಾಪ್ರಸಾದ್, ತಮ್ಮ ತಮ್ಮ ಪಕ್ಷದ ದೌರ್ಬಲ್ಯವನ್ನು ಮರೆಮಾಚಲು ಈ ಎರಡು ಪಕ್ಷಗಳು ಪರಿಸರವಾದಿಗಳ ವಿರುದ್ಧ ಧ್ವನಿ ಎತ್ತುತ್ತಿರುವದಾಗಿ ಹೇಳಿದರು.

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಪಶ್ಚಿಮ ಘÀಟ್ಟ ಪ್ರದೇಶವನ್ನು ಸೇರಿಸುವ ಪ್ರಸ್ತಾವನೆಯನ್ನು ಯುನೆಸ್ಕೋಗೆ ಕಳುಹಿಸಿಕೊಡುವ ಸಂದರ್ಭ ಕೇಂದ್ರÀ್ರದಲ್ಲಿ ಇದ್ದುದು ಕಾಂಗ್ರೆಸ್ ಸರ್ಕಾರವಾಗಿತ್ತಲ್ಲದೆ, ಅಂದು ಇದರ ಪರವಾಗಿ ಯುನೆಸ್ಕೋಗೆ ಕಳುಹಿಸಿದ ತಂಡದಲ್ಲಿ ಪರಿಸರ ಸಂಘÀಟನೆಯ ಪ್ರತಿನಿಧಿಯನ್ನು ಸೇರಿಸಿದ್ದು ಇದೇ ಕಾಂಗ್ರೆಸ್ ಎಂದು ಹಿಂದಿನ ಘಟನಾವಳಿಗಳ ಬಗ್ಗೆ ಡಾ.ದುರ್ಗಾಪ್ರಸಾದ್ ಬೆಳಕು ಚೆಲ್ಲಿದರು. ಜಿಲ್ಲೆÉಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ, ಬಫರ್ ಝೋನ್ ಮೊದಲಾದವರುಗಳಿಗೆ ಅವಕಾಶವಿಲ್ಲವೆಂದು ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರತಿನಿಧಿ ಆಯ್ಕೆಯಾದರು. ಅವರದೇ ಕೇಂದ್ರÀ್ರದಲ್ಲಿರುವ ಬಿಜೆಪಿ ಸರ್ಕಾರದಿಂದಲೇ ಬ್ರಹ್ಮಗಿರಿ, ತಲಕಾವೇರಿ, ಪುಷ್ಪಗಿರಿ ಪ್ರದೇಶಗಳು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆÉಯಾಗಿದೆ. ಆ ಮೂಲಕ ಬಿಜೆಪಿ ಚುನಾವಣಾ ಸಂದರ್ಭ ನೀಡಿದ ಭರವಸೆಯನ್ನು ಉಲ್ಲಂಘಿಸಿದೆ. ಕೇಂದ್ರದಲ್ಲಿ ಪರಿಸರವಾದಿಗಳು ಅಧಿಕಾರದಲ್ಲಿ ಇಲ್ಲ. ಪರಿಸರವಾದಿಗಳು ವಾದಿಸುವದನ್ನು ಕೇಂದ್ರÀ್ರದ ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಹೆಚ್.ಬಿ.ರಮೇಶ್ ಹಾಗೂ ಎ.ಸಿ.ಸಾಬು ಉಪಸ್ಥಿತರಿದ್ದರು.