ವೀರಾಜಪೇಟೆ, ಫೆ. 10: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಪೋಷಕ-ಶಿಕ್ಷಕರ ಸಭೆಯನ್ನು ತಾ. 13 ರಂದು ಅಪರಾಹ್ನ 2 ಗಂಟೆಗೆ ಬಿಎ ವಿಭಾಗದ ಕಟ್ಟಡದಲ್ಲಿ ಕರೆಯಲಾಗಿದೆ.

ಈ ವೇಳೆ ಆರೋಗ್ಯ ವಿಷಯದ ಕುರಿತು ಮಡಿಕೇರಿ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಸುನೀತಾ ಮುತ್ತಣ್ಣ ಮಾಹಿತಿ ನೀಡಲಿದ್ದಾರೆ.