ಗೋಣಿಕೊಪ್ಪಲು, ಫೆ.10: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸೇವ್ ಕೊಡಗು ಹೋರಾಟ ವೇದಿಕೆ ತಾ.18 ರಂದು ಗೋಣಿಕೊಪ್ಪಲಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಬೆಂಬಲ ವ್ಯಕ್ತಪಡಿಸಿರುವದಾಗಿ ಅಧ್ಯಕ್ಷರಾದ ಮಾಣೀರ ಕೆ.ಮುತ್ತಪ್ಪ ತಿಳಿಸಿದ್ದಾರೆ.

ಇಂದು ಗೋಣಿಕೊಪ್ಪಲಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊಡಗಿನ ಕಾಫಿ ಬೆಳೆಗಾರರು, ರೈತರು ಪರಿಸರ ಪೂರಕ ಕೃಷಿ ಪದ್ಧತಿಗಳನ್ನು ತಲತಲಾಂತರದಿಂದ ಅಳವಡಿಸಿಕೊಳ್ಳುತ್ತಾ ಬಂದಿದ್ದು ಕೊಡಗಿಗೆ ಕಸ್ತೂರಿ ರಂಗನ್ ವರದಿ ಜಾರಿಯ ಅಗತ್ಯವಿಲ್ಲ. ಇಲ್ಲಿನ ಕಂದಾಯಭೂಮಿಯನ್ನು ಹೊರತುಪಡಿಸಿ ಅರಣ್ಯ ಜಾಗದಲ್ಲಿ ಯಾವದೇ ಕಾರ್ಯಕ್ರಮ ಅಳವಡಿಸಿಕೊಳ್ಳಲಿ.

ತಾ.18 ರಂದು ಗೋಣಿಕೊಪ್ಪಲಿನಲ್ಲಿ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಶ್ರೀಮಂಗಲ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಕೃಷಿಕರನ್ನು ಸಂಘಟಿಸಿ ಕರೆತರಲಾಗುವದು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಲವಕುಶಾಲಪ್ಪ, ಬೊಜ್ಜಂಗಡ ಸಂಪತ್ ಮುಂತಾದವರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವದಾಗಿ ತಿಳಿಸಿದ್ದಾರೆ.