ವೀರಾಜಪೇಟೆ, ಫೆ. 11: ವೀರಾಜಪೇಟೆ ನಗರದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಬಯಲು ರಂಗಮಂಟಪ ಮತ್ತು ಕ್ರೀಡಾ ಕೇಂದ್ರವನ್ನು ಮೃಸೂರು ಧರ್ಮ ಕೇಂದ್ರದ ಪ್ರಧಾನ ಗುರುಗಳಾದ ರೇ.ಫಾ ಡಾ. ಕೆ.ಎಂ. ವಿಲೀಯಂ ಇಂದು ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೊಂದಿಗೆ ಕ್ರೀಡೆಗೆ ಸಹ ಪ್ರೋತ್ಸಹ ನೀಡುತ್ತಿದೆ ಇದರಿಂದ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಿ ಅರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯಶ ಕಾಣುತ್ತಾರೆ ಎಂದರು.

ಕಾಲೇಜು ಶಿಕ್ಷಣ ಸಂಸ್ಥೆಗೆ ದಶಮಾನೋತ್ಸವ ಅಚರಿಸುವ ಸವಿನೆನಪಿಗಾಗಿ ಅನ್ನಿಸ್ ಲೈಟ್ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಸಂತ ಅನ್ನಮ್ಮ ವಿಧ್ಯಾ ಸಂಸ್ಥೆಗಳ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೊಡಗು ವಲಯದ ಧÀರ್ಮ ಗುರುಗಳಾದ ರೇ.ಫಾ. ಟಿ ಮದಲೈಮುತ್ತು, ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲ ಐಸಾಕ್ ರತ್ನಾಕರ್, ಸಹ ಧರ್ಮ ಗುರುಗಳಾದ ರೋಷನ್ ಬಾಬು ಮತ್ತು ಮೈಸೂರು ಧರ್ಮ ಪ್ರಾಂತ್ಯದ ವಿವಿಧ ಗುರುಗಳು, ಕೊಡಗಿನ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳು ಇತರರಿದ್ದರು.