ಕುಶಾಲನಗರ, ಫೆ. 10: ಇಲ್ಲಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ವತಿಯಿಂದ ರೈತ ಸಂಘದ ಬಳಿ ರೂ. 23 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೆಚ್ಚುವರಿ ಭೋಜನ ಕೊಠಡಿಯನ್ನು ಸಂಘದ ಅಧ್ಯಕ್ಷ ಕೆದಂಬಾಡಿ ಎಂ. ಪ್ರಸನ್ನ ಉದ್ಘಾಟಿಸಿದರು.
ಅರ್ಚಕ ಪುರುಷೋತ್ತಮ್ ಅವರಿಂದ ಗಣಪತಿ ಹೋಮ, ಪೂಜಾ ವಿಧಿವಿಧಾನ ನಡೆಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೃಷ್ಣರಾಜ್ ನಿರ್ದೇಶಕರಾದ ಜಗದೀಶ್, ಹೆಚ್.ಬಿ. ಚಂದ್ರಪ್ಪ, ಆರ್.ಕೆ. ಚಂದ್ರು, ಮಾಜಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್ ಮತ್ತು ಕಾರ್ಯನಿರ್ವಣಾಧಿಕಾರಿ ಪಾರ್ವತಿ ಹಾಗೂ ಸಿಬ್ಬಂದಿಗಳು ಇದ್ದರು.