ಗೋಣಿಕೊಪ್ಪಲು, ಫೆ. 10: ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆ ನಿಧಿಯಿಂದ ರೂ. 17.40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕುಂದ ಗ್ರಾಮದ ಹುದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಶಾಸಕರ ಕೆ.ಜಿ. ಬೋಪಯ್ಯ ಚಾಲನೆ ಉದ್ಘಾಟಿಸಿದರು.

ಜಿ.ಪಂ. ಸದಸ್ಯೆ ಶ್ರೀಜ ಸಾಜಿ, ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ಅರುವತ್ತೋಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ, ಗ್ರಾ.ಪಂ. ಸದಸ್ಯ ಮನೆಯಪಂಡ ಬೋಪಣ್ಣ, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಚಂದ್ರಶೇಖರ್, ಹಾತೂರು ಗ್ರಾ.ಪಂ. ಉಪಾಧ್ಯಕ್ಷ ಗುಮ್ಮಟೀರ ದರ್ಶನ್ ನಂಜಪ್ಪ, ವೀರಾಜಪೇಟೆ ಟೌನ್ ಬ್ಯಾಂಕ್ ಸದಸ್ಯ ಮಲ್ಲಂಡ ಮಧು ದೇವಯ್ಯ, ಸ್ಥಳೀಯರಾದ ಕುಶಾಲಪ್ಪ ಸೇರಿದಂತೆ ಹಲವರು ಹಾಜರಿದ್ದರು.