ಸೋಮವಾರಪೇಟೆ,ಫೆ.10: ಸಮೀಪದ ಮಸಗೋಡು ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನವನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಬ್ಬೂರುಕಟ್ಟೆ ಗ್ರಾಮದ ಮೋರಿಕಲ್ಲು ನಿವಾಸಿ ಅಜಿತ್ ಎಂಬವರಿಗೆ ಸೇರಿದ ಟಿಪ್ಪರ್‍ನಲ್ಲಿ, ತಲ್ತರೆಶೆಟ್ಟಳ್ಳಿಯ ಅಭಿ ಎಂಬಾತನು ಮಸಗೋಡು ಹೊಳೆಯಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಸಾಗಿಸುತ್ತಿದ್ದ ಸಂದರ್ಭ ಇಲ್ಲಿನ ಪೊಲೀಸರು ವಾಹನ ಮತ್ತು ಮರಳನ್ನು ವಶಪಡಿಸಿಕೊಂಡಿದ್ದು, ಆರೋಪಿ ಚಾಲಕ ಪರಾರಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ಪಿಎಸ್‍ಐ ಶಿವಶಂಕರ್, ಸಿಬ್ಬಂದಿಗಳಾದ ಶಿವಕುಮಾರ್, ಮಧು, ಜಗದೀಶ್, ಪ್ರವೀಣ್, ಸಂದೇಶ್, ಮಹೇಂದ್ರ ಮತ್ತು ಕುಮಾರ್ ಪಾಲ್ಗೊಂಡಿದ್ದರು.