ಮಡಿಕೇರಿ. ಫೆ.11 : ಮಡಿಕೇರಿ ಆಕಾಶವಾಣಿಯ 103.1 ರ ತರಂಗಾಂತರದಲ್ಲಿ ರೈತ ಧ್ವನಿ ಕಿಸಾನ್‍ವಾಣಿ ಕಾರ್ಯಕ್ರಮದಲ್ಲಿ ನಿತ್ಯವೂ ನೂತನ ಹಾಗೂ ಉಪಯುಕ್ತ ವಿಚಾರಗಳು ಪ್ರಸಾರವಾಗಲಿವೆ, ದಿನವೂ ಸಂಜೆ 6. 50 ರಿಂದ 7.20ರವರೆಗೆ ಪ್ರಯೋಜನಕಾರಿ ಕೃಷಿ ಜ್ಞಾನದ ಸಂಗತಿಗಳು ಬಿತ್ತರವಾಗಲಿವೆ.

ಪ್ರತೀ ಮಂಗಳವಾರ ನೇರ ಪ್ರಸಾರದಲ್ಲಿ ಕೃಷಿ ಮತ್ತು ಪರಿಸರ ಸಂಬಂಧಿ ರಸಪ್ರಶ್ನೆಗಳು ಹಾಗೂ ರೈತರೊಡನೆ ನೇರ ಸಂವಾದ ಕೃಷಿಸಿರಿ. ಪ್ರತಿ ಶುಕ್ರವಾರ ನಾಡು ನಾಡಿ ಪ್ರಸ್ತುತ ಕೃಷಿ ಪರಿಸ್ಥಿತಿಗಳ ಅವಲೋಕನದ ಕಾರ್ಯಕ್ರಮ, ಪ್ರತಿ ಶನಿವಾರ ಪರಿಸರ, ಕೃಷಿ ಮತ್ತು ಬದುಕು ಕುರಿತು ಮಾಹಿತಿ ಮತ್ತು ಮನೋರಂಜನೆ ನೀಡುವ ಕಾರ್ಯಕ್ರಮ ಕೃಷಿಪುಂಜ. ಇದರಂತೆ ಹವಾಮಾನ ವರದಿ, ಕೃಷಿ ಉತ್ಪನ್ನಗಳ ಧಾರಣೆಯೂ ಸೇರಿಕೊಂಡು ಅನುಭವಿಗಳು ತಜ್ಞರೊಡನೆ ಸಂವಾದ, ಕೃಷಿಚಟುವಟಿಕೆಗಳ ಕುರಿತ ಕೃಷಿ ಕಹಳೆ, ಗ್ರಾಮೀಣರಿಗೆ ಅನುಕೂಲವಾಗುವ ವಿಚಾರಗಳ ದಿಕ್ಸೂಚಿ, ಕೃಷಿ ಮಾಹಿತಿ, ಕೃಷಿ ಸಮಾರಂಭಗಳ ವರದಿ ನೇರ ಪ್ರಸಾರದಲ್ಲಿ ಸಮೀಕ್ಷೆ ಮುಂತಾದವುಗಳ ಪ್ರಸಾರವಾಗಲಿದೆ ಎಂದು ನಿಲಯ ನಿರ್ದೇಶಕರು ತಿಳಿಸಿದ್ದಾರೆ.