ವೀರಾಜಪೇಟೆ, ಫೆ : 11 ವೀರಾಜಪೇಟೆ ರೋಟರಿ ಕ್ಲಬ್ ಹಾಗೂ ಮೈಸೂರು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ತಾ. 17 ರಂದು ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಂ. ಎಸ್. ರವಿ ತಿಳಿಸಿದ್ದಾರೆ. ಇಲ್ಲಿನ ತಾಲೂಕು ಮೈದಾನದ ಬಳಿ ಇರುವ ರೋಟರಿ ಸಭಾಂಗಣದಲ್ಲಿ ನಡೆಯುವ ಶಿಬಿರದಲ್ಲಿ ರಕ್ತದೊತ್ತಡ, ಜಿ.ಆರ್.ಜಿ.ಎಸ್, ಇ.ಸಿ.ಜಿ ಹಾಗೂ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರೊಂದಿಗೆ ಸಮಾಲೋಚ ನೆಗೂ ಅವಕಾಶವನ್ನು ಏರ್ಪಡಿಸ ಲಾಗಿದೆ ಎಂದು ಕಾರ್ಯದರ್ಶಿ ರೋ ಚೇತನ್ ಮುತ್ತಣ್ಣ ತಿಳಿಸಿದ್ದಾರೆ. ನೋಂದಾವಣೆಗಾಗಿ 9448106066 ಇಲ್ಲವೇ 9480730884 ಇವರನ್ನು ಸಂಪರ್ಕಿಸಬಹುದಾಗಿದೆ.