ಶನಿವಾರಸಂತೆ, ಫೆ. 10: ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ 15 ದಿನಗಳ ಕಾಲ ನಡೆದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಮುಕ್ತಾಯ ಸಮಾರಂಭ ತಾ. 11ರಂದು (ಇಂದು) ಮಧ್ಯಾಹ್ನ 1.30ಕ್ಕೆ ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ಎಂ.ಎಸ್. ಶಿವಕುಮಾರ್ ವಹಿಸುವರು. ತೆಂಕಲಗೋಡು ಬೃಹನ್ಮಠ ಯಸಳೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸಮಾರಂಭದ ಉದ್ಘಾಟನೆ ಮಾಡುವರು.
ಕಲ್ಲುಮಠದ ಶ್ರೀ ಮಹಾಂತಸ್ವಾಮಿ, ಮನೆಹಳ್ಳ ಮಠದ ಶ್ರೀ ಮಹಾಂತಶಿವಲಿಂಗಸ್ವಾಮಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜಿ ಅರಣ್ಯ ಸಚಿವ ಬಿ.ಎ. ಜೀವಿಜಯ ಮತ್ತಿತರರು ಭಾಗವಹಿಸುವರು.