ಸೋಮವಾರಪೇಟೆ, ಫೆ. 10: ರಾಜ್ಯ ಸರ್ಕಾರದ 2019ರ ಬಜೆಟ್‍ನಲ್ಲಿ ಎನ್‍ಪಿಎಸ್ ಯೋಜನೆಯನ್ನು ರದ್ದುಪಡಿಸುವ ವಿಷಯವನ್ನು ಪ್ರಸ್ತಾಪಿಸದ ಕ್ರಮವನ್ನು ಎನ್‍ಪಿಎಸ್ ಸರ್ಕಾರಿ ನೌಕರರ ಸಂಘ ಖಂಡಿಸಿದೆ.
ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಹಾಗೂ ಬೆಳಗಾವಿ ಅಧಿವೇಶನದಲ್ಲಿ ನೌಕರರಿಗೆ ಯೋಜನೆಯನ್ನು ರದ್ದುಪಡಿಸುವ ಆಶ್ವಾಸನೆಯನ್ನು ನೀಡಿತ್ತು. ಇದನ್ನು ರಾಜ್ಯ ಸರ್ಕಾರಿ ಎನ್‍ಪಿಎಸ್ ಸರ್ಕಾರಿ ನೌಕರರ ಸಂಘ ಖಂಡಿಸಿದ್ದು, ಸರ್ಕಾರದ ಕ್ರಮವನ್ನು ವಿರೋಧಿಸಿ ಹೋರಾಟ ನಡೆಸÀಲಾಗುವದು ಎಂದು ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ಸತೀಶ್ ಎಚ್ಚರಿಸಿದ್ದಾರೆ.