ಮಡಿಕೇರಿ, ಫೆ.11 :ನೋಬೆಲ್ ಪ್ರಶಸ್ತಿ ವಿಜೇತ ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಪ್ರತಿಷ್ಠಿತ ಅನ್ವೇಷಣೆ “ರಾಮನ್ ಪರಿಣಾಮ”ವನ್ನು ಜಗತ್ತಿಗೆ ಘೋಷಿಸಿದ ದಿನವಾದ ತಾ. 28 ನ್ನು ಪ್ರತಿ ವರ್ಷ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಎಂದು ರಾಷ್ಟ್ರದಾದ್ಯಂತ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತಾ. 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯು “ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ” ಎಂಬ ಕೇಂದ್ರ ವಿಷಯದಡಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ “ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ” ಎಂಬ ವಿಷಯದ ಕುರಿತು ಲೇಖನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕರಾವಿಪ ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೇವಾಡ ತಿಳಿಸಿದ್ದಾರೆ.
ಆಸಕ್ತರು ಸಾವಿರ ಪದಗಳು ಮೀರದಂತೆ ಕಡ್ಡಾಯವಾಗಿ ಕನ್ನಡದಲ್ಲಿ ಲೇಖನ ಬರೆದು ಕಳುಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಲೇಖನದೊಂದಿಗೆ ತಮ್ಮ ಹೆಸರು, ಪೂರ್ಣ ವಿಳಾಸ, ಮೊಬೈಲ್Â ಸಂಖ್ಯೆ ಹಾಗೂ ಇ-ಮೇಲ್ ವಿವರಗಳನ್ನು ನಮೂದಿಸಬೇಕು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರವನ್ನು ನೀಡಲಾಗುವದು. ಲೇಖನಗಳನ್ನು ತಾ. 23ರ ಒಳಗಾಗಿ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, “ವಿಜ್ಞಾನ ಭವನ”, ನಂ. 24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು 560 070 ಈ ವಿಳಾಸಕ್ಕೆ ಪೋಸ್ಟ್ ಮೂಲಕ ಅಥವಾ ಇ-ಮೇಲ್ : ಞಡಿvಠಿ.iಟಿಜಿo@gmಚಿiಟ.ಛಿom ಗೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 080-26718939, 9483549159 ಸಂಪರ್ಕಿಸಬಹುದು.