ಸಿದ್ದಾಪುರ, ಪೆ. 10: ಸಿದ್ದಾಪುರ ಗ್ರಾಮ ಪಂಚಾಯಿತಿಯ ಆಡಳಿತ ವೈಫಲ್ಯವನ್ನು ಖಂಡಿಸಿ ಸಿಪಿಐಎಂ ನಿಂದ ಸಿದ್ದಾಪುರದ ಬಸ್ ನಿಲ್ದಾಣ ದಲ್ಲಿ ಬಹಿರಂಗ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಸಿಪಿಐ (ಎಂ) ಜಿಲ್ಲಾ ಮುಖಂಡ ಹೆಚ್.ಬಿ ರಮೇಶ್ ಮಾತನಾಡಿ ಸಿದ್ದಾಪುರ ಗ್ರಾ.ಪಂ.ಯಲ್ಲಿ ಅವ್ಯವಹಾರ ತಾಂಡವವಾಡುತ್ತಿದೆ ಎಂದು ದೂರಿದರು.

ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಮುಂಬಾಗವನ್ನು ಕೆಡವಿ ಮಳಿಗೆ ನಿರ್ಮಿಸಲು ಯತ್ನಿಸಿದ್ದ ಸಂದÀರ್ಭದಲ್ಲಿ ಪಕ್ಷವು ಇದರ ವಿರುದ್ಧ ದ್ವನಿಯೆತ್ತಿ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದರೂ ಕೂಡ ಅದನ್ನು ಲೆಕ್ಕಿಸದೆ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಕಾಮಗಾರಿ ಪ್ರಾರಂಭಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.

ಕೇರಳ ರಾಜ್ಯದ ಸಿಪಿಐಎಂ ಪಕ್ಷದ ಮುಖಂಡರುಗಳಾದ ಶ್ರೀದರ್, ಸುರೇಶ್ ಕುಮಾರ್, ಕೊಡಗು ಜಿಲ್ಲಾ ಮುಖಂಡರಾದ ಡಾ.ಐ.ಆರ್ ದುರ್ಗಾಪ್ರಸಾದ್, ಎನ್.ಡಿ ಕುಟ್ಟಪ್ಪ ಮಾತನಾಡಿದರು. ಸಭೆಯಲ್ಲಿ ಪಕ್ಷದ ಪ್ರಮುಖರಾದ ಅನಿಲ್ ಕುಟ್ಟಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.