ಮಡಿಕೇರಿ, ಫೆ. 10: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಆಶ್ರಯದಲ್ಲಿ ನೀನಾಸಮ್ ತಿರುಗಾಟ 2018-19 ಅಂಗವಾಗಿ ನಾಟಕ ಪ್ರದರ್ಶನ ತಾ. 12 ಮತ್ತು 13 ರಂದು ಮಡಿಕೇರಿಯಲ್ಲಿ ನಡೆಯಲಿದೆ.

ಅಕ್ಷರ ಕೆ.ವಿ. ನಿರ್ದೇಶನದ ಸೇತುಬಂಧನ ನಾಟಕ ತಾ. 12 ರಂದು ಸಂಜೆ 6.30 ಗಂಟೆಗೆ ಮತ್ತು ಬಿ.ಆರ್. ವೆಂಕಟರಮಣ ಐತಾಳ ಅನುವಾದಿಸಿ ಜೋಸೇಫ್ ಜಾನ್ ನಿರ್ದೇಶಿಸಿದ ಆಶ್ಚರ್ಯ ಚೂಡಾಮಣಿ ನಾಟಕ ತಾ. 13 ರಂದು ಸಂಜೆ 6.30 ಗಂಟೆಗೆ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಆಯೋಜಿತವಾಗಿವೆ.

ರಂಗಾಸಕ್ತರೆಲ್ಲರಿಗೂ ನಾಟಕ ಪ್ರದರ್ಶನಕ್ಕೆ ಮುಕ್ತ ಸ್ವಾಗತವಿದ್ದು, ಮಂಗಳವಾರ ಮತ್ತು ಬುಧವಾರ ಸಂಜೆ 6.30 ಗಂಟೆಗೆ ನಾಟಕ ಪ್ರಾರಂಭವಾಗಲಿದೆ ಎಂದು ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.