ಮಡಿಕೇರಿ, ಫೆ. 10: ಬಲ್ಲಮಾವಟಿ ಗ್ರಾಮಪಂಚಾಯತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಮೂವೇರ ಸದಾ ಮುದ್ದಪ್ಪ ಎಂಬವರಿಗೆ ಸೇರಿದ ಹಸುವನ್ನು ಕೊಂದು ಹಾಕಿದ್ದು, ಕೊಟ್ಟಿಗೆಯಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಭಾಗಮಂಡಲ ಅರಣ್ಯ ವಲಯದ ಕಕ್ಕಬೆ ಉಪವಲಯ ಅರಣ್ಯಾಧಿಕಾರಿ ಎಂ.ಬಿ. ಸುರೇಶ್, ಅರಣ್ಯ ರಕ್ಷಕರಾದ ಕಾಳೇಗೌಡ, ಸೋಮನಗೌಡ ಸ್ಥಳ ಪರಿಶೀಲನೆ ನಡೆಸಿದರು.