ಮಡಿಕೇರಿ, ಫೆ. 12 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. 13 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ಗಾಳಿಬೀಡು ಗ್ರಾಮದ ಅಡ್ಕದ ಬಾಣೆ ಮಾದೂರಪ್ಪ ಸಾಂಸ್ಕøತಿಕ ವೇದಿಕೆಯಲ್ಲಿ ಅರೆಭಾಷೆ ಸಂಸ್ಕøತಿ ಕೆಡ್ಡಸ ಹಬ್ಬ ಕಾರ್ಯಕ್ರಮ ನಡೆಯಲಿದೆ.

ಗಾಳಿಬೀಡು ನಿವೃತ್ತ ಡಿವೈಎಸ್‍ಪಿ ಯಾಲದಾಳು ಡಿ. ಕೇಶವಾನಂದ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಗಾಳಿಬೀಡು ಗ್ರಾ.ಪಂ.ಅಧ್ಯಕ್ಷರಾದ ಪುದಿಯತಂಡ ಸುಬಾಷ್ ಸೋಮಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 9 ಗಂಟೆಯಿಂದ 9.30 ರವರೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯುವದು.

ನಂತರ ನಡೆಯುವ ಗ್ರಾಮೀಣ ಜನಪದ ಕ್ರೀಡಾ ಸ್ಪರ್ಧೆಯಲ್ಲಿ ಮಕ್ಕಳಿಗೆ ಕೈ ಕಟ್ಟಿ ಬಿಸ್ಕೆಟ್ ಕಚ್ಚಿ ತಿನ್ನುವ ಸ್ಪರ್ಧೆ (5 ವರ್ಷದ ಒಳಗಿನ ಮಕ್ಕಳಿಗೆ) ಗಾದೆ ಮಾತು ಕುಳಿತಲ್ಲೆ ಬರೆದು ವೇದಿಕೆಯಲ್ಲಿ ಹೇಳುವದು (10ನೇ ತರಗತಿ ಒಳಗಿನ ಮಕ್ಕಳಿಗೆ ಸಮಯ 10 ನಿಮಿಷ), ಮಹಿಳೆಯರಿಗೆ ನೀರು ಚೆಂಬಿನ ಓಟ

(ಚೆಂಬು ತಾವೇ ತರತಕ್ಕದ್ದು) ಕೋಳಿ ಜಗಳ, ಬಕೆಟ್ಟಿಗೆ ಚೆಂಡು ಹಾಕುವದು (50 ವರ್ಷದ ಮೇಲಿನವರಿಗೆ) ಪುರುಷರಿಗೆ ಬಲೂನಿಗೆ ರಬ್ಬರ್ ಬಿಲ್ಲಿನಿಂದ ಕಲ್ಲು ಹೊಡೆದು ಒಡೆಯುವದು, ಗೋಣಿ ಚೀಲದ ಓಟ (ಗೋಣಿ ತರತಕ್ಕದ್ದು) ಕೋಳಿ ಜಗಳ ಕಾಲ್ ಕಟ್ಟಿ ಓಡುವದು, ಬಕೆಟ್ಟಿಗೆ ಚೆಂಡು ಹಾಕುವದು (50 ವರ್ಷದ ಮೇಲೆನವರಿಗೆ), ದಂಪತಿಗಳಿಗೆ ಅಡಿಕೆ ಹಾಳೆ ಎಳೆಯುವದು, ಸಾರ್ವಜನಿಕರಿಗೆ ಪಟ್ಟಣಕ್ಕೆ ಬಾಂಬ್ ಅರೆಭಾಷೆ ಹಾಡು ರಸಪ್ರಶ್ನೆ-ಇಬ್ಬರ ತಂಡ(ಅರೆಭಾಷೆ ಸಾಹಿತ್ಯ ಸಂಸ್ಕøತಿಗೆ ಸಂಬಂಧಿಸಿದಂತೆ).

ನಂತರ ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪಿ.ಸಿ. ಜಯರಾಮ ಇತರರು ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭದ ನಂತರ ಸಂಜೆ 3 ಗಂಟೆಗೆ ಸ್ಥಳೀಯ ಕಲಾವಿದರಿಂದ ಮನರಂಜನೀಯ ಅರೆಭಾಷೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.