ಮಡಿಕೇರಿ, ಫೆ. 14: ಮಾಯಮುಡಿಯ ಕಮಟೆ ಶ್ರೀ ಮಹಾದೇವರ ವಾರ್ಷಿಕ ಉತ್ಸವ ತಾ. 15 ರಿಂದ 19 ರವರೆಗೆ ನಡೆಯಲಿದೆ. ತಾ. 15 ರಂದು ಸಂಜೆ 7 ಗಂಟೆಗೆ ಕೊಡಿಮರ ನಿಲ್ಲಿಸುವದು. ತಾ. 16 ರಂದು ಪೂರ್ವಾಹ್ನ 11.30 ಗಂಟೆಗೆ ಗಣಪತಿಗೆ ಪಂಚ ಕಜ್ಜಾಯ, ಈಶ್ವರನಿಗೆ ಬಿಲ್ವ ಪತ್ರಾರ್ಚನೆ, ತಾ. 17 ರಂದು ಈಶ್ವರನಿಗೆ ಕ್ಷೀರಾಭಿಷೇಕ, ತಾ. 18 ರಂದು ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ಸಾಯಂಕಾಲ 6 ಗಂಟೆಗೆ ನೆರವು. ತಾ. 19 ರಂದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಸಾಯಂಕಾಲ 6 ಗಂಟೆಗೆ ದೇವರ ದರ್ಶನ, ಅಭ್ಯಂಜನ ಮತ್ತು ದೇವರ ನೃತ್ಯ, ನಂತರ ವಸಂತ ಪೂಜೆ, ವಿಷ್ಣುಮೂರ್ತಿ ಮತ್ತು ಗುಳಿಗನಿಗೆ ಪೂಜೆ ಜರುಗಲಿದೆ. ತಾ. 20 ರಂದು ಪೂರ್ವಾಹ್ನ 11 ಗಂಟೆಗೆ ರುದ್ರಾಭಿಷೇಕ, ನಾಗನಿಗೆ ಪೂಜೆ ನಂತರ ಮಹಾಪೂಜೆ ನಡೆಯಲಿದೆ. ಪ್ರತಿ ದಿನ ಮಂಗಳಾರತಿ ಬೆಳಿಗ್ಗೆ - ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನದ ವ್ಯವಸ್ಥೆ ಇದೆ ಎಂದು ಪ್ರಕಟಣೆ ತಿಳಿಸಿದೆ.