ಕುಶಾಲನಗರ, ಫೆ. 14: ಕುಶಾಲನಗರ ಪಟ್ಟಣ ಪಂಚಾಯಿತಿಯ 2019-20 ರ ಆಯವ್ಯಯ ಪಟ್ಟಿ ತಯಾರಿ ಮಾಡುವ ಹಿನ್ನೆಲೆ ಪೂರ್ವಭಾವಿ ಸಭೆ ನಡೆಯಿತು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರಪೇಟೆ ತಹಶೀಲ್ದಾರ್ ಮತ್ತು ಪಂಚಾಯಿತಿ ಆಡಳಿತಾಧಿಕಾರಿ ಗೋವಿಂದರಾಜು ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ನಾಗರಿಕರಿಂದ ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಪಟ್ಟಣದ ಬಡಾವ ಣೆಗಳ ಅಭಿವೃದ್ಧಿ, ಮೂಲಭೂತ ಸೌಕರ್ಯಗಳು, ಕಾವೇರಿ ನದಿ ಸಂರಕ್ಷಣೆ, ಪರಿಸರ ಪೂರಕ ಯೋಜನೆ ಗಳು, ಸ್ವಚ್ಛತಾ ಕಾರ್ಯಕ್ರಮಗಳು, ಒಳಚರಂಡಿ ವ್ಯವಸ್ಥೆ, ಎಸ್ಸಿ/ಎಸ್ಟಿ ಯೋಜನೆ ಅನುಷ್ಠಾನ, ಪಟ್ಟಣದಲ್ಲಿ ಸಮರ್ಪಕ ವಾಹನ ಸಂಚಾರ ನಿಲುಗಡೆ ವ್ಯವಸ್ಥೆ, ಹೈಟೆಕ್ ಶೌಚಾಲಯಗಳ ನಿರ್ಮಾಣ ಮುಂತಾದ ಕಾರ್ಯ ಯೋಜನೆಗಳ ಬಗ್ಗೆ ಪ್ರಮುಖರು ಅಧಿಕಾರಿಗಳ ಗಮನಕ್ಕೆ ತಂದರು. ಹಿಂದಿನ ಬಜೆಟ್‍ನಲ್ಲಿ ಘೋಷಣೆಯಾಗಿ ಅನುಷ್ಠಾನಗೊಳ್ಳದ ಯೋಜನೆಗಳನ್ನು ಮುಂದುವರೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಂದರ್ಭ ಮಾತನಾಡಿದ ಆಡಳಿತಾಧಿಕಾರಿ ಗೋವಿಂದರಾಜು, ಎಲ್ಲಾ ಯೋಜನೆ ಗಳ ಬಗ್ಗೆ ಪರಿಶೀಲನೆ ನಡೆಸಿ ಅವುಗಳನ್ನು ಅನುಷ್ಠಾನಗೊಳಿಸಲು ಯೋಜನೆಯಲ್ಲಿ ಅನುದಾನ ಮೀಸಲಿರಿಸಲು ಪಟ್ಟಿ ಸಿದ್ಧಗೊಳಿಸ ಲಾಗುವದು. ನಂತರ ಸಾರ್ವಜನಿಕರ ಗಮನಕ್ಕೆ ತಂದು ಆಯವ್ಯಯ ಪಟ್ಟಿ ಬಿಡುಗಡೆಗೊಳಿಸಲಾಗುವದು ಎಂದರು. ಪಟ್ಟಣದಲ್ಲಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಮಾತನಾಡಿದ ಪ.ಪಂ. ಮುಖ್ಯಾಧಿಕಾರಿ, ನಾಗರಿಕರಿಗೆ ಯಾವದೇ ರೀತಿಯ ಹೊರೆಯಾಗ ದಂತೆ ಬಜೆಟ್ ಮಂಡಿಸಲಾಗುವದು. ಕಾವೇರಿ ನದಿ ಸ್ವಚ್ಛತೆಗೆ ಬಜೆಟ್‍ನಲ್ಲಿ ಪ್ರಮುಖ ಆದ್ಯತೆ ಕಲ್ಪಿಸಲಾಗುವದು ಎಂದು ತಿಳಿಸಿದರು. ಈ ಸಂದರ್ಭ ಪಂಚಾಯಿತಿ ಅಧಿಕಾರಿ ಸತೀಶ್, ಮಾಜಿ ಅಧ್ಯಕ್ಷರುಗಳಾದ ಹೆಚ್.ಜೆ. ಕರಿಯಪ್ಪ, ಡಿ.ಕೆ. ತಿಮ್ಮಪ್ಪ, ರೇಣುಕಾ, ನೂತನ ಸಾಲಿನ ಪಂಚಾಯಿತಿ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ನಾಗರಿಕರು ಇದ್ದರು.