ಗುಡ್ಡೆಹೊಸೂರು, ಫೆ. 14: ದೇಶದಾದ್ಯಂತ ಮೇರಾ ಪರಿವಾರ್ ಬಿ.ಜೆ.ಪಿ. ಪರಿವಾರ್ ಕಾರ್ಯಕ್ರಮ ಆರಂಭಗೊಂಡಿದ್ದು, ಕೊಡಗು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಗುಡ್ಡೆಹೊಸೂರು ಅತ್ತೂರಿನ ತಮ್ಮ ಮನೆಯ ಮೇಲೆ ಪಕ್ಷದ ಧ್ವಜ ಹಾರಿಸಿದರು. ಈ ಸಂದರ್ಭ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಮಾರಪ್ಪ, ಅಲ್ಲಿನ ಬೂತ್ ಅಧ್ಯಕ್ಷ ದೇವಪ್ಪ, ಗುಡ್ಡೆಹೊಸೂರು ಸ್ಥಾನೀಯ ಸಮಿತಿ ಅಧ್ಯಕ್ಷ ಎಂ.ಆರ್. ಉತ್ತಪ್ಪ, ಗ್ರಾ.ಪಂ. ಸದಸ್ಯರಾದ ಪ್ರವೀಣ್, ಪುಷ್ಪ, ಸ್ಥಳೀಯರಾದ ಮನೋಜ್, ದಾದಪ್ಪ, ಸಲೀಂ, ಕುಡೆಕ್ಕಲ್ ಗುರುಪ್ರಸಾದ್, ರಾಜಮಣಿ, ನರೇಂದ್ರ ಹಾಜರಿದ್ದರು. ಅಧ್ಯಕ್ಷತೆಯನ್ನು ಗ್ರಾಮದ ಬೂತ್ ಅಧ್ಯಕ್ಷ ದೇವಪ್ಪ ವಹಿಸಿದ್ದರು. ಕುಡೆಕಲ್ ಗಣೇಶ್ ಸ್ವಾಗತಿಸಿ, ಗ್ರಾ.ಪಂ. ಸದಸ್ಯೆ ಪುಷ್ಪ ವಂದಿಸಿದರು.