ಮಡಿಕೇರಿ, ಫೆ. 14: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪ್ರತಿ ಮೂರು ವರ್ಷಕೊಮ್ಮೆ ನಡೆಯುವ ದೈವಕೋಲ ಉತ್ಸವವು ಈ ಬಾರಿ ತಾ. 28 ಮತ್ತು ಮಾ. 1 ರಂದು ನಡೆಯಲಿದೆ. ದೈವಕೋಲ ಉತ್ಸವದ ಪ್ರಯುಕ್ತ ತಾ. 28 ರಂದು ರಾತ್ರಿ 7 ಗಂಟೆಯಿಂದ ಮಾ. 1 ರ ಅಪರಾಹ್ನದವರೆಗೆ ರಕ್ತೇಶ್ವರಿ, ವಿಷ್ಣುಮೂರ್ತಿ, ಕುಟ್ಟಿಚಾತ, ಕರಿಂಗಾಳಿ, ಗುಳಿಗ, ನುಚ್ಚುಟ, ಭೈರವನ್, ಪಾಷಾಣಮೂರ್ತಿ ಮತ್ತು ಅಪ್ಪಚ್ಚೀರ ಮಂದಣ್ಣ ಅಜ್ಜಪ್ಪ ತೆರೆಗಳ ಉತ್ಸವ ನಡೆಯಲಿದೆ. ತಾ. 28 ರ ರಾತ್ರಿ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ದೇವಾಲಯದ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದು, ಮಾ. 1 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ವಿಷ್ಣು ಮೂರ್ತಿ ದೈವಕೋಲ ಮೇಲೇರಿ ಮತ್ತು 9 ಗಂಟೆಗೆ ರಕ್ತೇಶ್ವರಿ ದೈವಕೋಲ ಉತ್ಸವ ನಡೆಯಲಿದೆ.
ಭಕ್ತಾದಿಗಳು ದೈವಕೋಲ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.