ನಾಪೆÇೀಕ್ಲು: ಮೈಸೂರಿನಲ್ಲಿ ನಡೆದ 26ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ನಾಪೆÇೀಕ್ಲು ಸೇಕ್ರೆಡ್ ಹಾಟ್ರ್ಸ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ದಿಲನ್ ತಿಮ್ಮಯ್ಯ ಸಿ.ಎಂ. ಪ್ರಥಮ ಸ್ಥಾನ ಹಾಗೂ 5ನೇ ತರಗತಿ ವಿದ್ಯಾರ್ಥಿ ಧೀರಜ್ ಕಾರ್ಯಪ್ಪ ಸಿ.ಎಂ ದ್ವಿತೀಯ ಸ್ಥಾನ ಪಡೆದಿದ್ದಾರೆ.ಒಡೆಯನಪುರ: ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಮೈಸೂರಿನ ಶಿಕ್ಷಕರ ಭವನದಲ್ಲಿ ನಡೆದ 8ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿಯಲ್ಲಿ ಸಮೀಪದ ಶನಿವಾರಸಂತೆಯ ವಿದ್ಯಾರ್ಥಿಗಳು ಭಾಗವಹಿಸಿ ಕಟಾ ಮತ್ತು ಯೋಗ ವಿಭಾಗದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೇ ರೀತಿ ಕುಮಿತೆ ವಿಭಾಗದಲ್ಲಿ ಪ್ರಶಸ್ತಿ ಪಡೆದು ಚಾಂಪಿಯನ್ ಟ್ರೋಫಿ ಪಡೆದುಕೊಂಡಿದೆ.

ಚಾಂಪಿಯನ್ ಟ್ರೋಫಿ ಕರಾಟೆ ಪಟುಗಳು: ಸಾನ್ವಿ, ಕೌಶಿ, ಸುಜಿತ್, ರೋಚನ್, ಹೇಮಂತ್, ಚಿನ್ಮಯ್, ಹೇಮಂತ್ ಆಚಾರ್ಯ, ಗೋಕುಲ್, ಸೌಜನ್ಯ, ಅಂಕಿತ, ಅಖಿಲೇಶ್, ತೇಜಸ್, ಶ್ರೀರಾಮ್, ಶರವಣ್ಯ.

ಬ್ಲಾಕ್‍ಬೆಲ್ಟ್ ವಿಭಾಗದ ಪ್ರಶಸ್ತಿ ವಿಜೇತರು: ಪ್ರೀತಮ್, ಭಾವನ, ವಿನಯ್, ವಿಖ್ಯಾತ್, ಮನಿಶ್, ಆಕಾಶ್, ಮನುಕೃಷ್ಣ, ಯದುಕೃಷ್ಣ, ಜ್ಞಾನವ್, ಜೀವಿತ ಮತ್ತು ಮುಕುಂದ್. ತರಬೇತುದಾರರಾಗಿ ಭರತ್, ಕಿರಣ್, ಜಯಕುಮಾರ್, ಪಳನಿ, ಶಾಹಿದ್, ಸಂಜಯ್, ಸಚಿನ್, ಅಕ್ಷಯ್ ಮತ್ತು ಹಿರಿಯ ತರಬೇತುದಾರ ಎನ್.ಎಸ್. ಅರುಣ್ ಕಾರ್ಯನಿರ್ವಹಿಸಿದ್ದರು.