ಕೂಡಿಗೆ, ಫೆ. 14: ಚಿಕ್ಕತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೈಗಾರಿಕಾ ಪ್ರದೇಶದ ಎಸ್‍ಎಲ್‍ಎನ್ ಕಾಫಿ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರುಗಳಾದ ಎಂ. ವಿಶ್ವನಾಥ್ ಮತ್ತು ಸಾತಪ್ಪನ್ ಅವರು “ಶಾಲಾ ದತ್ತು ಯೋಜನೆ”ಯಲ್ಲಿ ಶಾಲೆಗೆ ಪ್ರೊಜೆಕ್ಟರ್ ಅನ್ನು ನೀಡಿದ್ದು ಅದರ ಉದ್ಘಾಟನೆಯನ್ನು ಎಸ್‍ಎಲ್‍ಎನ್ ಸಂಸ್ಥೆಯ ವ್ಯವಸ್ಥಾಪಕರಾದ ರಾಧ ಸೋಮಯ್ಯ ನೆರವೇರಿಸಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಧುನಿಕ ತಂತ್ರಜ್ಞಾನಗಳು ಬಹಳ ಮುಖ್ಯ. ಹಾಗಾಗಿ ಎಸ್‍ಎಲ್‍ಎನ್ ಸಂಸ್ಥೆಯ ವತಿಯಿಂದ ಪ್ರೊಜೆಕ್ಟರ್ ನೀಡಲಾಗಿದೆ.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಇದು ಸಹಕಾರಿಯಾಗಿದ್ದು, ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧೆ ಎದುರಿಸಲು ಸಹಕಾರಿ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶಾರದ, ಎಸ್‍ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಸದಸ್ಯರುಗಳು, ಎಸ್‍ಎಲ್‍ಎನ್ ಸಂಸ್ಥೆಯ ನಾಗರಾಜ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕ ಹೆಚ್.ಎಂ. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕರು ಸ್ವಾಗತಿಸಿದರು. ಶಿಕ್ಷಕಿ ಹೆಚ್.ಎಸ್. ಸೌಮ್ಯ ಶಾರದಾ ವಂದಿಸಿದರು.