ಮಡಿಕೇರಿ, ಫೆ. 14: ಉಗ್ರರ ಭಯೋತ್ಪಾದನೆಗೆ ಭಾರತೀಯ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿರುವದು ಅತ್ಯಂತ ಕಳವಳಕಾರಿ ವಿದ್ಯಾಮಾನ. ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಜಾತಿ, ಧರ್ಮ, ಪಕ್ಷ ರಹಿತವಾಗಿ ಭಾರತೀಯರು ಸಂಘಟಿತರಾಗ ಬೇಕು. ಈ ಹಿನ್ನೆಲೆಯಲ್ಲಿ ತಾ. 15 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸೋಣ. ಸರ್ವರು ಜಾತಿ, ಪಕ್ಷ ಬೇಧ ಮರೆತು ದೇಶಕ್ಕಾಗಿ ದೇಹತ್ಯಾಗ ಮಾಡಿದ ಯೋಧರಿಗೆ ನಮಿಸೋಣ ಬನ್ನಿ...