ಮಡಿಕೇರಿ, ಫೆ. 15: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹೆಚ್.ಐ.ವಿ. ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಶ್ವಿತಾ ಕಾರ್ಯಕ್ರಮ ಉದ್ಘಾಟಿಸಿದರು.

ಹೆಚ್.ಐ.ವಿ. ಸೋಂಕಿತರಿಗೆ ಸರಕಾರದಿಂದ ಉಚಿತ ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುವದರ ಜೊತೆಯಲ್ಲಿ ಮೈತ್ರಿ, ಮನಸ್ವಿನಿ ಯೋಜನೆಯ ಕುರಿತು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಕೆ.ಕೆ. ಮಹೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೆಡ್ ರಿಬ್ಬನ್ ಕ್ಲಬ್‍ನ ಸಂಚಾಲಕಿ ಹೆಚ್.ಪಿ. ನಿರ್ಮಲ, ರೆಡ್‍ಕ್ರಾಸ್ ಸಂಚಾಲಕಿ ಬಿ. ನಮಿತಾ, ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿನಿಯರು ಹಾಜರಿದ್ದರು. ಕವಿತಾ ಪ್ರಾರ್ಥಿಸಿ, ಪಂಚಮಿ ಸ್ವಾಗತಿಸಿ, ಸ್ಮಿತ ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.