ಮಡಿಕೇರಿ, ಫೆ. 15: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ತುತ್ತಾದ ಜನತೆಗೆ ಪರಿಹಾರ ಮೊತ್ತವಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಈಗಾಗಲೇ ರೂ. 30 ಲಕ್ಷದಷ್ಟು ಮೊತ್ತವನ್ನು ಪ್ರಥಮ ಹಂತವಾಗಿ ವಿತರಿಸಲಾಗಿದೆ.
ತಾ. 16 ರಂದು (ಇಂದು) 2ನೇ ಹಂತವಾಗಿ ಸುಮಾರು ರೂ. 15 ಲಕ್ಷ ಮೊತ್ತವನ್ನು ಗೌಡ ಸಮಾಜ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಗೌಡ ಸಮಾಜದ ಸಹಕಾರದೊಂದಿಗೆ, ಗೌಡ ಸಮಾಜಗಳ ಒಕ್ಕೂಟದ ಸಹಯೋಗದಲ್ಲಿ ಮಡಿಕೇರಿ ಗೌಡ ಸಮಾಜ ಕಟ್ಟಡದಲ್ಲಿ ಪೂರ್ವಾಹ್ನ 11 ಗಂಟೆಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.