ಮಡಿಕೇರಿ. ಫೆ. 15: ತಾ. 15ರಂದು ಬ್ಯಾರಿ ಸಮುದಾಯದ ಹಿರಿಯ ಧುರೀಣ, ಲೇಖಕ ಹಾಗೂ ಚಿಂತಕ ಅಬ್ದುಲ್ ರಹೀಂ ಟಿ.ಕೆ. ಅವರು ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ತಾ. 16ರಂದು (ಇಂದು) ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.