ಮಡಿಕೇರಿ, ಫೆ. 16: ನ್ಯಾಷನಲ್ ಕೆಡೆಟ್ ಕಾಪ್ಸ್ 19ನೇ ಬೆಟಾಲಿಯನ್ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಎನ್‍ಸಿಸಿ ವಿದ್ಯಾರ್ಥಿಗಳಿಗೆ ‘ಬಿ’ ಸರ್ಟಿಫಿಕೇಟ್ ಪರೀಕ್ಷೆಗೆ ಸಂಬಂಧಿಸಿದಂತೆ ಇಂದು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ತರಬೇತಿ ನಡೆಯಿತು.ಸೈನಿಕ ಶಾಲೆ ಸೇರಿದಂತೆ ಕೊಡಗಿನ 8 ಕಾಲೇಜುಗಳ ಸುಮಾರು 305 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದು, ಬಂದೂಕಿನ ಬಳಕೆ, ಮ್ಯಾಪ್ ರೀಡಿಂಗ್, ಡ್ರಿಲ್ ಇತ್ಯಾದಿಗಳ (ಮೊದಲ ಪುಟದಿಂದ) ಬಗ್ಗೆ ತರಬೇತಿ ನೀಡಲಾಗುತ್ತಿದೆ. ಎನ್‍ಸಿಸಿ 20ನೇ ಬೆಟಾಲಿಯನ್ ಮುಖ್ಯಸ್ಥರಾದ ಶಿವಮೊಗ್ಗದ ಕರ್ನಲ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಶಿಬಿರ ನಡೆಯಿತು. ತಾ. 17 ರಂದು (ಇಂದು) ಸಂತ ಜೋಸೆಫರ ಶಾಲೆಯಲ್ಲಿ ಲಿಖಿತ ಪರೀಕ್ಷೆ ಏರ್ಪಡಿಸಲಾಗಿದೆ.