ಮಡಿಕೇರಿ, ಫೆ. 16: ನಿನ್ನೆ ರಾತ್ರಿ ವೀರಾಜಪೇಟೆ ಬಳಿ ಸಂಭವಿಸಿದ ಬೈಕ್ ಅವಘಡದಲ್ಲಿ ಯುವಕನೊಬ್ಬ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ.
ಮಡಿಕೇರಿಯ ದೂರವಾಣಿ ಇಲಾಖೆಯ ಉದ್ಯೋಗಿ ಹುಲಿತಾಳ ವೆಂಕಟರಮಣ ಅವರ ಪುತ್ರ ಆದಿತ್ಯ (23) ನಿನ್ನೆ ರಾತ್ರಿ, ವೀರಾಜಪೇಟೆಯಿಂದ ಮಡಿಕೇರಿಗೆ ಬುಲೆಟ್ ಬೈಕ್‍ನಲ್ಲಿ ಬರುತ್ತಿದ್ದಾಗ, ಮಾರ್ಗಮಧ್ಯೆ ಅವಘಡ ಸಂಭವಿಸಿದೆ. ಅಡುಗೆ ಅನಿಲ ಸಾಗಿಸುತ್ತಿದ್ದ ವಾಹನವೊಂದು ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ ಎಂದು ಗೊತ್ತಾಗಿದೆ. ತೀವ್ರ ಗಾಯಗೊಂಡಿದ್ದ ಆದಿತ್ಯನನ್ನು (ಮೊದಲ ಪುಟದಿಂದ) ಮಡಿಕೇರಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರಿಗೆ ಸಾಗಿಸಲಾಗಿದೆ. ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಸ್ಥಿತಿ ಗಂಭೀರವಾಗಿದ್ದು, ಪ್ರಜ್ಞಾಶೂನ್ಯನಾದುದಾಗಿ ತಿಳಿದುಬಂದಿದೆ. ಇದೇ ಸ್ಥಿತಿಯಲ್ಲಿ ಮಡಿಕೇರಿಗೆ ಹಿಂತಿರುಗುತ್ತಿದ್ದಾಗ ಮಾರ್ಗಮಧ್ಯೆ ಯುವಕ ಆದಿತ್ಯ ಸಾವಿಗೀಡಾಗಿರುವದಾಗಿ ತಿಳಿದುಬಂದಿದೆ. ಆದಿತ್ಯ ಉಜಿರೆಯಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಮೃತನು ಪೋಷಕರು ಮತ್ತು ಸಹೋದರಿಯನ್ನು ಅಗಲಿದ್ದಾನೆÉ.