ಕುಶಾಲನಗರ, ಫೆ 16: ಕುಶಾಲನಗರ ಸಮೀಪದ ಸುಂದರನಗರ ಗ್ರಾಮದಲ್ಲಿರುವ ಕರ್ನಾಟಕ ರಾಜ್ಯ ಪಾನಿಯ ನಿಗಮದ ಡಿಪೋದಲ್ಲಿ ಅವಧಿ ಮೀರಿದ ಹಾಗೂ ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ನಾಶಪಡಿಸುವ ಕಾರ್ಯಾಚರಣೆ ನಡೆಯಿತು. ಕೆಎಸ್‍ಬಿಸಿಎಲ್ ಡಿಪೋ ಅಬಕಾರಿ ನಿರೀಕ್ಷಕರಾದ ಆರ್.ಎಂ.ಚೈತ್ರಾ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಸುಮಾರು ರೂ. 2 ಲಕ್ಷದ 13 ಸಾವಿರದ 912 ಮೌಲ್ಯದ 1145 ಲೀಟರ್ ಬಿಯರ್ ಅನ್ನು ನಾಶಪಡಿಸಲಾಯಿತು.

ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ದಾಸ್ತಾನು ಡಿಪೋದಲ್ಲಿ ಕಾರ್ಯಾಚರಣೆ ನಡೆಯುವ ಸಂದರ್ಭ ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಪಿ.ಸಂಪತ್‍ಕುಮಾರ್, ಜಿ.ಆರ್.ಗಣೇಶ್, ಡಿಪೋ ವ್ಯವಸ್ಥಾಪಕ ವಿ.ಎಂ.ಕದಮ್, ಸಿಬ್ಬಂದಿಗಳಾದ ಎ.ಪಿ.ವೀರೇಶ್, ಕಿರಣ್, ರಮೇಶ್ ಮತ್ತಿತರರು ಇದ್ದರು.