ಮಡಿಕೇರಿ, ಫೆ. 16: ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲಮಾಧ್ಯಮ ಶಾಲೆಯ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾ. 17ರಂದು (ಇಂದು) ಸುಪ್ರಜ ಫ್ಲರಿ ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಹಾಸನದ ನಾಟ್ಯಕಲಾ ನಿವಾಸದ ಸ್ಥಾಪಕರು, ಅಂತರ್ರಾಷ್ಟ್ರೀಯ ಭರತನಾಟ್ಯ ಶಿಕ್ಷಕಿ ವಿದ್ವಾನ್ ಉನ್ನತ್‍ಜೈನ್ ಉದ್ಘಾಟಿಸುವರು. ಗುರುಕುಲದ ಅಧ್ಯಕ್ಷೆ ಡಿ. ಸುಜಲಾದೇವಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಕಲೇಶಪುರದ ಮಾಜಿ ಕ್ಯಾಫ್ಟನ್ ಬೆಟ್ಟೇಗೌಡ್ರು, ಗುರುಕುಲದ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್ ಉಪಸ್ಥಿತರಿರುವರು. ಇದೇ ಸಂದರ್ಭ ಹಾಸನದ ಅಭಿಯಂತರ ಎ.ಜಿ. ಮುಕುಂದ ಅವರನ್ನು ಸನ್ಮಾನಿಸ ಲಾಗುವದು ಎಂದು ಪ್ರಕಟಣೆ ತಿಳಿಸಿದೆ.