ವೀರಾಜಪೇಟೆ, ಫೆ. 16: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವದಾಗಿ ದೂರು ದಾಖಲು ಮಾಡಿದ್ದು, ಆತ ಕೊಂಡಂಗೇರಿ ಕಾವೇರಿ ಹೊಳೆಯ ತಟದಲ್ಲಿ ಶವವಾಗಿ ಪತ್ತೆಯಾಗಿರುವ ಕುರಿತು ಸಿದ್ದಾಪುರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಮೂಲತ: ನಂಜರಾಯಪಟ್ಟಣದ ನಿವಾಸಿ, ಕೆಲಸದ ನಿಮಿತ್ತ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ರಿಯ ಅಮತ್ತಿ ಗ್ರಾಮದಲ್ಲಿ ವಾಸವಾಗಿದ್ದ ಮಹೇಶ್ ಕೆ.ಜಿ. (32) ಎಂಬಾತ ಶವವಾಗಿ ಪತ್ತೆಯಾದ ವ್ಯಕ್ತಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಾ. 13ರಂದು ಮಹೇಶ್ ಕಾಣೆಯಾಗಿದ್ದಾರೆ ಎಂದು ಆತನ ಸಂಬಂಧಿ ರವಿ ದೂರು ನೀಡಿದ್ದರು ಆ ನಂತರದಲ್ಲಿ ಮಹೇಶ್ ಅವರ ಕುಟುಂಬದವರು ಹಾಗೂ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯು ಸುಳಿವು ದೂರಕಿರಲಿಲ್ಲ ತಾ. 14ರಂದು ಕೊಂಡಂಗೇರಿಯ ಕಾವೇರಿ ನದಿಯ ತಟದಲ್ಲಿ ಮಹೇಶ್ ಅವರ ದ್ವಿಚಕ್ರ ವಾಹನ (ಕೆಎ-12ಎಲ್-2023) ಪತ್ತೆಯಾಗಿತ್ತು. ಸನಿಹದ ಹೊಳೆಯ ಅಂಚಿನಲ್ಲಿ ಮೃತ ಶರೀರ ಗೋಚರಿಸಿದೆ. ಸ್ಥಳೀಯರು ಈಗ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ಸುದ್ಧಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಅಗಮಿಸಿದ ಪೊಲೀಸರು ಶವವನ್ನು ಮೃತ ವ್ಯಕ್ತಿ ಮಹೇಶ್ ಎಂದು ದೃಢೀಕರಿಸಿದ್ದಾರೆ ಮೃತ ವಿವಾಹಿತನಾಗಿದ್ದು, ಮರದ ಕೆಲಸ ಕಾರ್ಮಿಕನಾಗಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. ಪ್ರಕರಣವು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.