ಗೋಣಿಕೊಪ್ಪ ವರದಿ, ಫೆ. 16 : ಗೃಹಿಣಿ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಲ್ಯಮುಂಡೂರು ನಿವಾಸಿ ರಾಜಾ ಅವರ ಪತ್ನಿ ಪಲ್ಲವಿ (20) ಕಾಣೆಯಾದವರು. ಕಳೆದ ಜುಲೈ ತಿಂಗಳಿನಲ್ಲಿ ಚೆನ್ನಂಗೊಲ್ಲಿಯ ರತ್ನ ಎಂಬ ಸಂಬಂಧಿಕರ ಮನೆಗೆ ತೆರಳಿದ್ದ ಪತ್ನಿ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ರತ್ನ ಅವರನ್ನು ಸಂಪರ್ಕಿಸಿದಾಗ ನಾನು ಇಲ್ಲದ ಸಂದರ್ಭ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಹೇಳುತ್ತಿದ್ದಾರೆ ಎಂದು ಪತಿ ರಾಜಾ ದೂರು ನೀಡಿದ್ದಾರೆ. ಪತ್ತೆಯಾದರೆ ಗೋಣಿಕೊಪ್ಪ ಪೊಲೀಸ್ ಠಾಣೆ ಸಂಖ್ಯೆ
08274-247333 ಅನ್ನು ಸಂಪರ್ಕಿಸಬಹುದಾಗಿದೆ.